Ad Widget .

Health Tips|ದೇಹವನ್ನು ಆರೋಗ್ಯವಾಗಿಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳಲು ಹೀಗೆ ಮಾಡಿ

ಸಮಗ್ರ ನ್ಯೂಸ್: ದೇಹವನ್ನು ಆರೋಗ್ಯವಾಗಿಡಲು, ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರೋಗ್ಯಕರ ಆಹಾರವು ಸಹಾಯ ಮಾಡುತ್ತದೆ. ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಅಥವಾ ದೇಹವನ್ನು ಫಿಟ್ ಮತ್ತು ಸ್ಲಿಮ್ ಆಗಿ ಇರಿಸಿಕೊಳ್ಳಲು ಬಯಸುತ್ತೀರಾ?  ಹಾಗಿದ್ರೆ, ಈ ಡಿಟಾಕ್ಸ್ ಪಾನೀಯಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.

Ad Widget . Ad Widget .

ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುವ ಮತ್ತು ತೂಕ ನಷ್ಟಕ್ಕೆ ಬೆಳಗ್ಗೆ ಸೇವಿಸಬಹುದಾದ ಈ ಪಾನೀಯಗಳು ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

Ad Widget . Ad Widget .
  1. ಅಜವಾನ ನೀರು : ಸಾಮಾನ್ಯವಾಗಿ ಅಸಿಡಿಟಿ ಸಮಸ್ಯೆಗಳಿಗೆ ಸಹಾಕರವಾಗುವ ಅಜವಾನ ನೀರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕರುಳಿನ ಚಲನೆಯನ್ನು ಸುದಾರಿಗದಲ್ಲದೆ, ಉಸಿರಾಟದ ತೊಂದರೆಗಳನ್ನು ಸಹ ನಿಯಂತ್ರಿಸುತ್ತದೆ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ತಯಾರಿಸುವ ವಿಧಾನ: 1 ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಚಮಚ ಅಜವಾನ ಸೇರಿಸಿ ರಾತ್ರಿಯಿಡೀ ನೆನೆಯಲು ಬಿಡಿ. ಆ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಬೆಳಗ್ಗೆ ಎದ್ದು ಕುಡಿಯಿರಿ. ಎರಡು ಲೋಟ ನೀರಿನಲ್ಲಿ 1 ಟೀಚಮಚ ಅಜವಾನ ಸೇರಿಸಿ ಅದನ್ನು ಕುದಿಸಿ, ಆರಿಸಿಯು ಕುಡಿಯಬಹುದು.

2. ನಿಂಬೆ ನೀರು : ದೇಹದ ತೂಕ ಕಡಿಮೆ ಮಾಡಲು ನಿಂಬೆ ನೀರನ್ನು ಆಯ್ಕೆಯಾಗಿ ಕುಡಿಯುತ್ತಾರೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಅಲ್ಲದೆ, ಚಯಾಪಚಯ ಕ್ರಿಯೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ. ಇದು ಬಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ.

ಮಾಡುವ ವಿಧಾನ: ಒಂದು ಲೋಟ ಬೆಚ್ಚಗಿನ ನೀರಿಗೆ 1 ನಿಂಬೆ ರಸ, ಅಗತ್ಯ ಪ್ರಮಾಣದ ಉಪ್ಪನ್ನು ಈ ಡಿಟಾಕ್ಸ್ ಪಾನೀಯವನ್ನು ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದಲ್ಲದೆ, ಕಡಿಮೆ ಕ್ಯಾಲೋರಿ ಹೊಂದಿರುವ ನಿಂಬೆಹಣ್ಣಿನ ಸೇವನೆಯು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಸುಡಲು ಪ್ರಾರಂಭಿಸುತ್ತದೆ.

3. ಅರಿಶಿನ ನೀರು : ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ. ಇದು ದೇಹದಲ್ಲಿನ ಊತ ಮತ್ತು ನೋವಿಗೆ ಪರಿಹಾರ ನೀಡುತ್ತದೆ. ಅರಿಶಿನವನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ: ಬೆಚ್ಚಗಿನ ನೀರಿನಲ್ಲಿ ಅರಿಶಿನ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆ ಸೆಳೆತ, ಉಬ್ಬುವುದು ಮತ್ತು ಕ್ಯಾಲೋರಿ ಶೇಖರಣೆಯಿಂದ ಪರಿಹಾರ ದೊರೆಯುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

4.ದಾಲ್ಚಿನ್ನಿ ನೀರು : ದಾಲ್ಚಿನ್ನಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿರುವ ದಾಲ್ಚಿನ್ನಿ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಮಾಡುವ ವಿಧಾನ: ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯೊಂದಿಗೆ ಸೇಬಿನ ರಸವನ್ನು ಮಿಶ್ರಣ ಮಾಡಿ. ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯಿರಿ. ಇದರಿಂದ ಹೊಟ್ಟೆಯಲ್ಲಿರುವ ವಿಷಕಾರಿ ವಸ್ತುಗಳು ತಾನಾಗಿಯೇ ಹೊರಬರಲು ಆರಂಭಿಸುತ್ತದೆ. ಇದಲ್ಲದೇ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.

5. ಮೆಂತ್ಯ ನೀರು: ನೀವು ಕೊಲೆಸ್ಟ್ರಾಲ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೆ ಮೆಂತ್ಯ ನೀರು ನಿಮಗೆ ಪ್ರಯೋಜನಕಾರಿಯಾಗಿದೆ. ವಿಟಮಿನ್, ಫೈಬರ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಮೆಂತ್ಯ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ. ನೀವು ಇದನ್ನು ಪ್ರತಿದಿನ ಸೇವಿಸಿದರೆ, ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕ್ಯಾಲೊರಿಗಳು ಸುಡುತ್ತವೆ.

ಮಾಡುವ ವಿಧಾನ: ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ 1 ಲೋಟ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಆ ನೀರನ್ನು ಕುದಿಸಿ. ನೀರು ಅರ್ಧಕ್ಕೆ ಇಳಿದಾಗ ಆರಿಸಿ ಕುಡಿಯುವುದರಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
(ಸಂಗ್ರಹ)

ವಿ.ಸೂ: ಇಲ್ಲಿ ಪ್ರಕಟವಾಗುವ ಸಲಹೆಗಳು ತಜ್ಞರ ಅಭಿಪ್ರಾಯವಾಗಿರುತ್ತದೆ. ಅದಾಗ್ಯೂ ಬಳಸುವ ಮೊದಲು ನಿಮ್ಮ ಆರೋಗ್ಯ ಸಲಹೆಗಾರರನ್ನು ವಿಚಾರಿಸಿ

Leave a Comment

Your email address will not be published. Required fields are marked *