ಸಮಗ್ರನ್ಯೂಸ್: ಹಿಂದುತ್ವಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹಿಂದೂ ಕಣ್ಮಣಿ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿನೆನಪಿಗಾಗಿ, ಗೆಳೆಯರ ಬಳಗ ಸುರತ್ಕಲ್ ವತಿಯಿಂದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ದಸರಾ ಮಹೋತ್ಸವಕ್ಕೆ 14ನೇ ವರ್ಷದ ಶಾರದಾ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮುಖಾಂತರ ಪೆರ್ಮುದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಂ.ಎಸ್.ಇ.ಝಡ್ ಕಾಲೋನಿ ಕೋಡಿಕೆರೆ ಕುಳಾಯಿ ಇಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು ಹಿಂದೂ ಕಣ್ಮಣಿ ಆಗಿ, ಹಿಂದುತ್ವಕ್ಕಾಗಿ ಬಲಿದಾನಗೈದ ದಿವಂಗತ ಮಂಜುನಾಥ್ ಮಂಗಳೂರು ಅವರು ನಮ್ಮ ಜೊತೆ ಇಂದಿಗೂ ಇದ್ದಿದ್ದರೆ, ಇನ್ನಷ್ಟು ತಾಯಿ ಭಾರತಮಾತೆಯ ಸೇವೆಗೆ ಸದಾ ಸಿದ್ದರಿರುತ್ತಿದ್ದರು.ಅವರ ಹೆಸರಿನಲ್ಲಿ ಹುಟ್ಟಿಕೊಂಡ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಇಂದು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಮಂಜುನಾಥ್ ಅವರ ಬಲಿದಾನವನ್ನು ಸಮಾಜಕ್ಕೆ ನೆನಪಿಸುತ್ತದೆ.ಮಂಜುನಾಥ್ ಅವರ ಆದರ್ಶವನ್ನು ಧ್ಯೇಯವಾಗಿ ಇಟ್ಟುಕೊಂಡು ಹುಲಿವೇಷದ ಮೂಲಕ ಕಳೆದ 14 ವರ್ಷದಿಂದ ಬಲಿಷ್ಠ ಯುವಜನತೆಯ ಗುಂಪು ಕಟ್ಟಿಕೊಂಡು ಹಿಂದೂ ಸಮಾಜಕ್ಕೆ ಮಾದರಿಯಾಗಿ ಮಂಜಣ್ಣ ಸೇವಾ ಬ್ರಿಗೇಡ್ ಕಾರ್ಯಾಚರಿಸಿ ಜನರ ಮನಸಿನಲ್ಲಿ ದಿನೇ ದಿನೇ ಅಚ್ಚಳಿಯದೆ ಉಳಿಯುತ್ತಾ ಬಂದಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುರತ್ಕಲ್ ಇದರ ಅಧ್ಯಕ್ಷರಾದ ಯೋಗೀಶ್ ಕುಳಾಯಿ , ಪಿಲಿ ಚಾಮುಂಡಿ ಕುಡುಂಬುರು ಗುತ್ತಿನಾರ್ ಜಯರಾಮ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಗಣೇಶ್ ಹೊಸಬೆಟ್ಟು,ಮಹಾ ನಗರ ಪಾಲಿಕೆ ಸದಸ್ಯರು ವರುಣ್ ಚೌಟ ಮಾತನಾಡಿ ಸಂಸ್ಥೆಯ ಸೇವಾ ಚಟುವಟಿಕೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಮುದೆ ಇದರ ಸಂಚಾಲಕರು ರಮೇಶ್ ರಾವ್, ಎಸ್ ಎಸ್ ಫ್ರೆಂಡ್ಸ್ ಸ್ಥಾಪಕರು ರಾಮನಾಥ್ ಪೈ, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಶುಭಾಷ್ ಶೆಟ್ಟಿ, ಕೇಶವ ಹೊಸಬೆಟ್ಟು, ಮಂಜಣ್ಣ ಸೇವಾ ಬ್ರಿಗೇಡ್ ಅಧ್ಯಕ್ಷ ವಸಂತ್ ಹೊಸಬೆಟ್ಟು, ಗೆಳಯರ ಬಳಗ ಸುರತ್ಕಲ್ ಇದರ ಸ್ಥಾಪಕ ಅಧ್ಯಕ್ಷರು ನಾಗೇಶ್ ಪೂಜಾರಿ ತೋಕೂರು ವೇದಿಕೆಯಲ್ಲಿ ಇದ್ದರು. ಹಾಗೂ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಗೆಳೆಯರ ಬಳಗ ಮಂಜಣ್ಣ ಸೇವಾ ಬ್ರಿಗೇಡ್ ನ ಕಾರ್ಯಕರ್ತರು
ಉಪಸ್ಥಿತರಿದ್ದರು.
ದೀಕ್ಷಿತ್ ಶೆಟ್ಟಿ ತೋಕೂರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೆ ಶಾಲು ಹಾಕಿ ಬರ ಮಾಡಿಕೊಂಡರು.