Ad Widget .

ಚೈತ್ರಾ ಕುಂದಾಪುರ ಪ್ರಕರಣ| ಹಾಲಶ್ರೀ ‘ಆ’ ಹೆಸರನ್ನು ಬಾಯಿಬಿಡ್ತಾರ.?|ಹಲವು ಆಯಾಮದಲ್ಲಿ ತನಿಖೆ

ಸಮಗ್ರ ನ್ಯೂಸ್: ಕೋಟಿ ರೂ. ವಂಚನೆ ಪ್ರಕರಣದಲ್ಲಿ A3 ಆರೋಪಿ ಅಭಿನವ ಹಾಲಶ್ರೀ ಬಂಧನವಾಗಿದ್ದು ಚೈತ್ರಾ ಕುಂದಾಪುರ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.

Ad Widget . Ad Widget .

ಉದ್ಯಮಿ ಗೋವಿಂದ ಪೂಜಾರಿಗೆ ಕೋಟಿ ಕೋಟಿ ಧೋಖ ಮಾಡಿರುವ ಪ್ರಕರಣದಲ್ಲಿ ಚೈತ್ರಾ ಕುಂದಾಪುರಳನ್ನು ಸೆ.12ರಂದು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ಸೆ.14 ರಂದು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತಂದಾಗ ಮಾಧ್ಯಮದ ಮುಂದೆ “ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಎಲ್ಲಾ ದೊಡ್ಡವರ ಹೆಸರು ಹೊರ ಬರುತ್ತೆ” ಎಂದು ಹೇಳಿಕೆ ನೀಡಿದ್ದರು.

Ad Widget . Ad Widget .

ಇದಾದ ಬಳಿಕ ಆ ದೊಡ್ಡವರು ಯಾರೆಂಬ ಪ್ರಶ್ನೆ ಮೂಡಿತ್ತು. ಸ್ವಾಮೀಜಿ ಬಂಧನಕ್ಕಾಗಿ ಹಾತೊರೆವುತ್ತಿದ್ದರು. ಈದೀಗ ತಲೆಮರೆಸಿಕೊಂಡಿದ್ದ A3 ಆರೋಪಿ ಅಭಿನವ ಹಾಲಶ್ರೀಯನ್ನು ಸಿನಿಮೀಯ ರೀತಿಯಲ್ಲಿ ಸಿಸಿಬಿ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ.

ಇಂದು(ಸೆ.20) ಹಾಲಶ್ರೀಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ವೇಳೆ ಚೈತ್ರಾ ಕುಂದಾಪುರ ಹೇಳಿದಂತೆ ದೊಡ್ಡ ದೊಡ್ಡವರ ಹೆಸರು ಬಾಯಿಬಿಡ್ತಾರ ? ಆ ದೊಡ್ಡವರು ಯಾರು ಎನ್ನುವುದು ಕುತೂಹಲ ಮೂಡಿಸಿದೆ.

Leave a Comment

Your email address will not be published. Required fields are marked *