ಸಮಗ್ರ ನ್ಯೂಸ್ : ಬೆವರು ಬಿಚ್ಚದೆ ಯಾವ ರೀತಿ ಹಣ ಸಂಪಾದಿಸ ಬಹುದು ಎನ್ನುವುದಕ್ಕೆ ಚೈತ್ರಾ ಕುಂದಾಪುರ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗಿದೆ.
ಮೇಲೆ ಕಾಣುತ್ತಿರುವ ವ್ಯಕ್ತಿನ ನೋಡ್ತ ಇದ್ರೆ ಅದ್ಯಾವೊದೋ ಮಠದ ದೈವ ಶಕ್ತಿ ಹೊಂದಿರುವ, ಎಲ್ಲಾವನ್ನು ತ್ಯಾಗ ಮಾಡಿ ದೇವರ ಸ್ಮರಣೆಯಲ್ಲಿರುವ, ಧರ್ಮದ ಭಾಷಣ ಮಾಡುವ ಶ್ರೀ ಶ್ರೀ ಶ್ರೀ ಸ್ವಾಮೀಜಿ ಎಂದೇ ಹೇಳಬಹುದು. ಆತನ ಕೇಸರಿ ವಸ್ತ್ರ,ಆತನ ವಿಭೂತಿ, ಆತನ ಗಡ್ಡ, ಆತನ ಮಾಡುತ್ತಿರುವ ನಟನೆ, ಆತನ ಭಾಷಣ ಆರೇ ಏನು ನಾಟಕ ಏನು ನಾಟಕ. ಆದ್ರೇ ಈಗ ಈ ನಾಟಕ ಎಲ್ಲಾ ನುಚ್ಚು ನೂರಾಗಿದೆ. ಈಗ ಈ ಸ್ವಾಮೀಜಿ ಹೇಗಿದ್ದಾರೆ ನೋಡಿ.
ಅರೇ ಈತ ಯಾರು ಜಾಕೇಟ್& ಪ್ಯಾಂಟ್ ಹಾಕೋಂಡು, ಲೈಟ್ ಆಗಿ ಗಡ್ಡ ಬಿಟ್ ಕೊಂಡು ಟಿಪ್ ಟಾಪ್ ಆಗಿದ್ದಾನೆ ಅಂತೀರ? ಈತನೇ ನೋಡಿ ವಂಚಕ ಅಭಿನವ ಹಾಲಶ್ರೀ ಸ್ವಾಮೀಜಿ. ಹೌದು ಈತ ವಂಚಕಿ ಚೈತ್ರಾ ಕುಂದಾಪುರ ಪ್ರಕರಣದ A3 ಆರೋಪಿ.
ಹಾಗಿದ್ರೇ ಖಾವಿ ವಸ್ತ್ರದಲ್ಲಿದ್ದ ಈತ ಜಾಕೇಟ್ & ಪ್ಯಾಂಟ್ ಹಾಕಿದ್ದು ಹೇಗೆ ? ಇಲ್ಲಿದೆ ಆ ಸ್ಟೋರಿ…
ಚೈತ್ರಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ಅಭಿನವ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರು ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ಡ್ರೈವ್ ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಹೀಗೆ ಮೂರು ದಿನಗಳ ಹಿಂದೆ, ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಸ್ವಾಮೀಜಿಯವರು ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ದಾಗಿಯೂ, ಅಲ್ಲಿ ಕಾರಿನ ನಂಬರ್ ಪ್ಲೇಟ್ ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ತೆರಳಿತ್ತು.
ಆದರೆ, ಸೆ. 19ರ ಬೆಳಗ್ಗೆ ಬಂದ ವರ್ತಮಾನದ ಪ್ರಕಾರ, ಸ್ವಾಮೀಜಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಒಡಿಶಾದ ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ನೆಲೆಸಿದ್ದ ಸ್ವಾಮೀಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಅವರು ಹೋಟೆಲ್ ಗೆ ಹೋಗಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರು ಎಂದು ಹೇಳಲಾಗಿದೆ.
ಪ್ರತಿ ಗಂಟೆಗೆ ಸ್ಥಳ ಬದಲಾಯಿಸುತ್ತಿದ್ದ ಸ್ವಾಮೀಜಿ, ಹಾಲಶ್ರೀ ಅವರು ರೈಲಿನಲ್ಲಿ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕಾವಿಯನ್ನು ತ್ಯಜಿಸಿ, ಟೀ ಶರ್ಟ್, ಪ್ಯಾಂಟ್ ಹಾಕಿಕೊಂಡು ವೇಷ ಮರೆಸಿಕೊಂಡಿದ್ದರು. ಕಟಕ್ ನಿಂದ ಬೌದ್ಧ್ ಗಯಾಕ್ಕೆ ತೆರಳುವ ರೈಲಿನಲ್ಲಿದ್ದ ಅವರನ್ನು ಸೂಕ್ತವಾಗಿ ಗುರುತು ಹಿಡಿಯುವಲ್ಲಿ ಸಿಸಿಬಿ ಯಶಸ್ವಿಯಾಗಿದೆ. ಅವರನ್ನು ಕಟಕ್ ನಿಂದ ಬೆಂಗಳೂರಿಗೆ ಕರೆತರಲಾಗಿದೆ.