Ad Widget .

ಚೈತ್ರಾ ಕುಂದಾಪುರ ವಂಚನೆ ಪ್ರಕರಣ| ಈ ಕೇಸ್ ನಲ್ಲಿ ಯಾರೇ ಇದ್ರೂ ಬಿಡೋ ಪ್ರಶ್ನೆನೇ ಇಲ್ಲ – ಕಾಂಗ್ರೆಸ್

ಸಮಗ್ರ ನ್ಯೂಸ್: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಯಾರೇ ಬಾಗಿಯಾಗಿದ್ದರೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

Ad Widget . Ad Widget .

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಟಿಕೆಟ್ ಹೆಸರಲ್ಲಿ ಕೋಟಿ ಕೋಟಿ ರೂಪಾಯಿಯ ಅಕ್ರಮ ವಹಿವಾಟು ನಡೆದಿದ್ದು, ವಂಚನೆ ನಡೆದಿದ್ದು ಎಲ್ಲವೂ ಸಿಟಿ ರವಿ ಹಾಗೂ ಬಿಜೆಪಿಯ ಬಾಡಿಗೆ ಬಾಷಣಕೋರನಿಗೆ ಮೊದಲೇ ತಿಳಿದಿತ್ತಂತೆ ಎಂದು ಹೇಳಿದೆ. ಬಿಜೆಪಿ ಅಕ್ರಮವೊಂದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇಕೆ ಎಂದು ಪ್ರಶ್ನಿಸಿದೆ.

Ad Widget . Ad Widget .

ಬಿಜೆಪಿ ನಿಜಕ್ಕೂ ಹಣ ವಸೂಲಿ ಮಾಡಿ ಟಿಕೆಟ್ ನೀಡುವ ಕೆಲಸ ಮಾಡಿತ್ತೇ? ಎಂದು ಕೇಳಿದೆ. ಈ ಅಕ್ರಮದಲ್ಲಿ ಯಾರೇ ಬಾಗಿಯಾಗಿದ್ದರೂ ಬಿಡುವುದಿಲ್ಲ, ಸೂಕ್ತ ಸಾಕ್ಷ್ಯಧಾರವಿದ್ದರೆ ಬಿಜೆಪಿಯ ದಂಡನಾಯಕರನ್ನೂ ಬಂಧಿಸಿ ವಿಚಾರಣೆ ನಡೆಸಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ ಎಂದು ತಿಳಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 40% ಕಮಿಷನ್ ವಿಧಾನಸೌಧದಲ್ಲಿ ಮಾತ್ರವಲ್ಲ ಜಗನ್ನಾಥ ಭವನದಲ್ಲೂ ಕಮಿಷನ್ ವ್ಯವಹಾರ ಇತ್ತು ಎಂಬುದು “ಟಿಕೆಟ್ ಹಗರಣ”ದಿಂದ ತಿಳಿಯುತ್ತಿದೆ. ಯಡಿಯೂರಪ್ಪನವರು ಸರ್ಕಾರದ ವಿರುದ್ಧ ರಾಜ್ಯ ಪ್ರವಾಸ ಮಾಡುವ ಬದಲು ಕಾಸಿಗಾಗಿ ಟಿಕೆಟ್ ಮಾರಾಟ ಮಾಡುವ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ ಎಂದು ತಾಕೀತು ಮಾಡಲಾಗಿದೆ.

Leave a Comment

Your email address will not be published. Required fields are marked *