Ad Widget .

ರಾಜ್ಯ ರಾಜಧಾನಿಯಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರು ಈಗ, ರೋಗಗಳ ನಗರಿ ಎಂಬ ಹೊಸ ನಾಮಕರಣ ಆಗೂದರಲ್ಲಿ ಅಚ್ಚರಿ ಏನಿಲ್ಲ. ಇದಕ್ಕೆ ಕಾರಣ ಹೆಚ್ಚುತ್ತಿರುವ ಡೆಂಗ್ಯೂ ಕೇಸ್ ಗಳ ಸಂಖ್ಯೆ ಕಳೆದ ಒಂದೆರಡು ತಿಂಗಳಿನಿಂದ ಏರುಗತಿಯಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ ಆತಂಕಕಾರಿ ಗಡಿ ತಲುಪಿದೆ.

Ad Widget . Ad Widget .

ದಿನಕಳೆದಂತೆ ವಾತಾವರಣದಲ್ಲಿನ ಬದಲಾವಣೆ, ಮಳೆ ಬಿಸಿಲು ಸೇರಿದಂತೆ ಹಲವು ಕಾರಣಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಬೆಂಗಳೂರು ಡೆಂಘಿಯ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿದೆ.

Ad Widget . Ad Widget .

ಈ ತಿಂಗಳ 16 ದಿನಗಳಲ್ಲಿ ಬೆಂಗಳೂರಿನ ಒಟ್ಟು 1,766 ಮಂದಿಗೆ ರೋಗ ತಗುಲಿದೆ. ಬಿಸಿಲು, ಮಳೆ ಮತ್ತು ಹವಾಮಾನ ಬದಲಾವಣೆಯಿಂದ ಡೆಂಗ್ಯೂ ಏರಿಕೆಯಾಗ್ತಿದೆ ಎನ್ನಲಾಗಿದೆ. ಆರೋಗ್ಯ ಇಲಾಖೆ ಮಾಹಿತಿಯಂತೆ 12,693 ಮಂದಿ ಡೆಂಗ್ಯೂನಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ 1136 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದೆ. ಇದರಲ್ಲಿ 5,220 ಮಂದಿಯಲ್ಲಿ ಡೆಂಗ್ಯೂ ಧೃಢಪಟ್ಟಿದೆ.

Leave a Comment

Your email address will not be published. Required fields are marked *