Ad Widget .

ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು| ರಾಜ್ಯಸಭೆಯಲ್ಲಿ ಗುಡುಗಿದ ಹೆಚ್.ಡಿ ದೇವೇಗೌಡ| ಮೌನಕ್ಕೆ ಶರಣಾದ ಕರ್ನಾಟಕದ ಎಂ.ಪಿ ಗಳು!!

ಸಮಗ್ರ ನ್ಯೂಸ್: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಪೆಟ್ಟು ನೀಡಿದೆ. ಬೆಂಗಳೂರಿಗೆ ಕುಡಿಯುವ ನೀರು ಬೇಕಿದೆ, ಮುಂದೇನಾಗುತ್ತೋ ಗೊತ್ತಿಲ್ಲ. ಕಾವೇರಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ದುರಂತ. ಸರ್ಕಾರ ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ ಅನ್ನಿಸುತ್ತೆ. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಖಂಡಿಸಿದ್ದೆ. ಧರಣಿ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೆ.

Ad Widget . Ad Widget .

ಇವತ್ತು ಸದನದಲ್ಲಿ ಕಾವೇರಿ ವಿಚಾರ ಎತ್ತಿದ್ದೇನೆ. ಕರ್ನಾಟಕ, ತಮಿಳುನಾಡಿಗೆ ಸಂಬಂಧ ಇಲ್ಲದ ಅಧಿಕಾರನ್ನು ಗ್ರೌಂಡ್​ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ. ನಾವು ಒಪ್ಪಿಕೊಳ್ಳುತ್ತೇವೆ, ಆದರೆ ತಮಿಳುನಾಡು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಇದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲ ಎಂದರು ವಿಷಾಧ ವ್ಯಕ್ತಪಡಿಸಿದರು.

“ನಮ್ಮ ಸ್ನೇಹಿತರು ಸುಗಮ ರೀತಿಯ ಸಮಸ್ಯೆ ಪರಿಹರಿಸಲು ಬಯಸಿದರೆ, ನಾವೆಲ್ಲರೂ ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸೋಣ ಇಲ್ಲದಿದ್ದರೆ ವಿವಾದ ಮುಂದುವರಿಯುತ್ತದೆ ಮತ್ತು ಎರಡೂ ಕಡೆಯಿಂದ ಹೋರಾಟ ಮುಂದುವರಿಯುತ್ತದೆ. ನಾವು ಒಟ್ಟಿಗೆ ಕುಳಿತು ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸದ ಹೊರತು ಈ ಸಮಸ್ಯೆಯನ್ನು ಪರಿಹರಿಸಲಾಗದು, ಕಾನೂನಾತ್ಮಕವಾಗಿ ಖಂಡಿತವಾಗಿಯೂ ವಿವಾದ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮಳೆಯಿಲ್ಲದೆ ಬರ ಪರಿಸ್ಥಿತಿಯಿರುವುದರಿಂದ ಸಂಕಷ್ಟದಲ್ಲಿರುವ ಜನರ ಪರ ನಿಂತಿದ್ದೇನೆ. “ಕರ್ನಾಟಕ ಅಥವಾ ತಮಿಳುನಾಡಿಗೆ ಸೇರದ ಈ ಸದನದ ಎರಡೂ ಕಡೆಯ ಐವರು ಸದಸ್ಯರನ್ನು ನೀವು ( ರಾಜ್ಯಸಭಾ ಸದಸ್ಯ ಜಗದೀಪ್ ಧನಕರ್) ನಿಯೋಜಿಸಿ, ಅವರು ಹೋಗಿ ಜನರ ಸ್ಥಿತಿ ಏನಾಗಿದೆ ಎಂಬುದನ್ನು ನೋಡಿ ನಂತರ ಈ ಸದನಕ್ಕೆ ವರದಿ ಮಾಡಲಿ, ನಾನು ಒಪ್ಪಿಕೊಳ್ಳುತ್ತೇನೆ. ಅನಾವಶ್ಯಕವಾಗಿ ಜಗಳ ಮಾಡಿಕೊಳ್ಳುವುದು ಬೇಡ ಎಂದರು.

Leave a Comment

Your email address will not be published. Required fields are marked *