Ad Widget .

ಸಂಸತ್ತಿನ ವಿಶೇಷ ಅಧಿವೇಶನ/ ನಾಳೆಯಿಂದ ನೂತನ ಸಂಸತ್ ಭವನದಲ್ಲಿ

ಸಮಗ್ರ ನ್ಯೂಸ್: ಸೆ. 18ರಿಂದ 23ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದ ಕಲಾಪ ಹಳೆಯ ಸಂಸತ್ ಭವನದಲ್ಲಿ ಆರಂಭಗೊಂಡಿದ್ದು, ನಾಳೆಯಿಂದ ನೂತನ ಸಂಸತ್ ಭವನದಲ್ಲಿ ಮುಂದುವರೆಯಲಿದೆ.

Ad Widget . Ad Widget .

ಕಳೆದ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ನೂತನ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರಿಗೆ ಆಸನದ ವ್ಯವಸ್ಥೆ ‌ಇದೆ.

Ad Widget . Ad Widget .

ನಾಲ್ಕು ಅಂತಸ್ತಿನ ಕಟ್ಟಡವು ತ್ರಿಕೋನ ಆಕಾರವನ್ನು ಹೊಂದಿದ್ದು, ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ‌ಕರ್ಮ ದ್ವಾರ ಎಂಬ ಮೂರು ದ್ವಾರಗಳನ್ನು ಒಳಗೊಂಡಿದೆ.

ಕಲಾಪ ನೂತನ ಸಂಸತ್ ಭವನಕ್ಕೆ ವರ್ಗಾವಣೆ ಆಗುತ್ತಿರುವುದರಿಂದ, ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ.

ಬ್ರಿಟನ್ನಿನ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್‌ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬ್ರೇಕರ್ ವಿನ್ಯಾಸಗೊಳಿಸಿದ ಸಂಸತ್ ಭವನ 1927ರಲ್ಲಿ ನಿರ್ಮಾಣಗೊಂಡಿದ್ದು, 96 ವರ್ಷಗಳನ್ನು ಪೂರ್ತಿಗೊಳಿಸಿದೆ. ಸ್ವಾತಂತ್ರ್ಯ ಪೂರ್ವದ ನೆನಪುಗಳ ಜೊತೆಗೆ ಸ್ವಾತಂತ್ರೋತ್ತರ ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿರುವ ಹಳೆಯ ಸಂಸತ್ ಭವನ ಇತಿಹಾಸದ ಪುಟಗಳಲ್ಲಿ ಸೇರಲಿದೆ.

Leave a Comment

Your email address will not be published. Required fields are marked *