Ad Widget .

ಇಂದಿನಿಂದ 5 ದಿ‌ನ ಸಂಸತ್ ನ ವಿಶೇಷ ಅಧಿವೇಶನ

ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬದ ದಿನವಾದ ಇಂದು ಮೋದಿ ಸರ್ಕಾರದ 5 ದಿನದ ವಿಶೇಷ ಅಧಿವೇಶನ ಆರಂಭ ಆಗುತ್ತೆ. ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆದರೆ, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.

Ad Widget . Ad Widget .

ಆದರೆ ಇದಕ್ಕೂ ವಿಪಕ್ಷಗಳು ಅಪಸ್ವರ ಎತ್ತಿದ್ದರೂ ,ಸಂಸತ್​ ಕಲಾಪದಲ್ಲಿ ಬಿಜೆಪಿ (BJP) ಪ್ರಮುಖವಾಗಿ 5 ಬಿಲ್​​ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ.

Ad Widget . Ad Widget .

ಮೋದಿ ಸರ್ಕಾರ ದಿಢೀರ್​ ಅಂತ ವಿಶೇಷ ಅಧಿವೇಶನ ಏರ್ಪಡಿಸಿದೆ. ಇಂದಿನಿಂದ ಸೆಪ್ಟೆಂಬರ್​ 22ರವರೆಗೆ ಸಂಸತ್​ ಕಲಾಪ ನಡೆಯಲಿದೆ. ಇಂದು ಹಳೇ ಸಂಸತ್​ ಕಟ್ಟಡದಲ್ಲಿ ಅಧಿವೇಶನ ನಡೆಯಲಿದ್ದು, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.

ನೂತನ ಸಂಸತ್​ ಭವನಕ್ಕೆ ಮಂಗಳವಾರದಿಂದ ಕಲಾಪ ಶಿಫ್ಟ್​ ಆಗಲಿದೆ. ಹೀಗಾಗಿ ಸೆಂಟ್ರಲ್​ ವಿಸ್ತಾ ಕಟ್ಟಡದ ಮೇಲೆ ಉಪರಾಷ್ಟ್ರಪತಿ ಹಾಗು ರಾಜ್ಯಸಭೆ ಪೀಠಾಧ್ಯಕ್ಷ ಜಗದೀಪ್​ ಧನ್ಕರ್​, ಲೋಕಸಭೆ ಸ್ಪೀಕರ್​ ಓಂಬಿರ್ಲಾ ಪ್ರಪ್ರಥಮವಾಗಿ ತಿರಂಗಧ್ವಜ ಹಾರಿಸಿದ್ದಾರೆ. ಇಂದಿನಿಂದ ನಾಳೆಯಿಂದ ಆರಂಭವಾಗಲಿರುವ ಸಂಸತ್​ ಕಲಾಪದಲ್ಲಿ ಬಿಜೆಪಿ ಪ್ರಮುಖವಾಗಿ 5 ಬಿಲ್​​ಗಳನ್ನ ಮಂಡಿಸಲು ತಯಾರಿ ನಡೆಸಿದೆ. ಇನ್ನೊಂದ್ಕಡೆ ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳು ತಮ್ಮದೇ ಅಜೆಂಡಾಗಳನ್ನ ರೆಡಿಮಾಡಿವೆ.

ವಿಶೇಷ ಕಲಾಪದಲ್ಲಿ ಮಂಡನೆಯಾಗಲಿರುವ ಬಿಲ್ ಗಳಿವು:

1)NDA ಅಸ್ತ್ರ-01: ಕೇಂದ್ರ/ರಾಜ್ಯ ಚುನಾವಣಾ ಆಯುಕ್ತರ ನೇಮಕಾತಿ ತಿದ್ದುಪಡಿ ವಿಧೇಯಕ-2023
2)NDA ಅಸ್ತ್ರ-02: ‘ವಕೀಲರ ತಿದ್ದುಪಡಿ ವಿಧೇಯಕ’ ತಿದ್ದುಪಡಿ-2023
3)NDA ಅಸ್ತ್ರ-03: ‘ಅಂಚೆ ಕಚೇರಿ ವಿಧೇಯಕ’ ತಿದ್ದುಪಡಿ-2023
4)NDA ಅಸ್ತ್ರ-04: ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ-2023
5) NDA ಅಸ್ತ್ರ-05: ನೋಂದಣಿ ರದ್ದತಿ ಮತ್ತು ತಿದ್ದುಪಡಿ ಮಸೂದೆ, 2023

Leave a Comment

Your email address will not be published. Required fields are marked *