Ad Widget .

Health Tips|ಸ್ಟ್ರಾಲ್ ಕಡಿಮೆ ಮಾಡುವ ಈ ಹಣ್ಣುಗಳನ್ನು ಸೇವಿಸಿ…!

ಸಮಗ್ರ ನ್ಯೂಸ್: ಕೊಲೆಸ್ಟ್ರಾಲ್ ನಿಂದ ಹೃದಯ ಸಂಭಂದಿ ಖಾಯಿಲೆಗಳು ಹೆಚ್ಚಾಗುತ್ತಿರುದನ್ನು ದಿನನಿತ್ಯ ನೋಡುತ್ತೇವೆ. ಕೊಲೆಸ್ಟ್ರಾಲ್ ಹೃದಯಕ್ಕೆ ಮಾತ್ರವಲ್ಲದೆ, ಒಳಗಿರುವ ಇನ್ನಿತರ ಅಂಗಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಆದರೆ ಇದರ ನಿವಾರಣೆ ಹಣ್ಣುಗಳನ್ನು ತಿನ್ನುವುದರ ಮೂಲಕ ತಡೆಯಬಹುದು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸದ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುವ ವಿಚಾರದಲ್ಲಿ ನೋಡುವುದಾದರೆ ಹಣ್ಣುಗಳು ನಮ್ಮ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡಬಲ್ಲವು. ಹಣ್ಣುಗಳಲ್ಲಿ ಅಂತಹ ಔಷಧಿಯ ಗುಣ ಇರುತ್ತದೆ. ತಿನ್ನಲು ಸಿಹಿಯಾಗಿರುವ ನಿಸರ್ಗದತ್ತವಾದ ಹಣ್ಣುಗಳಲ್ಲಿ ಇಂತಹ ಲಕ್ಷಣಗಳು ಕಂಡುಬರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಈ ಕೆಳಕಂಡ ಹಣ್ಣುಗಳು ಬೇಡದ ಬೊಜ್ಜು ಮತ್ತು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತವೆ.

Ad Widget . Ad Widget . Ad Widget .

ಸೇಬು:
ದಿನಕ್ಕೊಂದು ಸೇಬು ತಿಂದರೆ ಡಾಕ್ಟರ್ ಕ್ಲಿನಿಕ್ ಗೆ ಅಲೆಯುವುದು ತಪ್ಪುತ್ತದೆ ಎನ್ನುತ್ತಾರೆ. ಏಕೆಂದರೆ ಸೇಬು ಅಷ್ಟರ ಮಟ್ಟಿಗೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸೇಬು ಹಣ್ಣು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಲ್ಲಿರುವ ಕರಗುವ ನಾರಿನ ಅಂಶ ಅಪಾರವಾಗಿದ್ದು, ಇದು ನಿಮ್ಮ ದೇಹದ LDL ಅಥವಾ ಕೆಟ್ಟ ಕೊಬ್ಬನ್ನು ತೆಗೆದು ಹಾಕುತ್ತದೆ.​

ಅವಕ್ಯಾಡೋ ಅಥವಾ ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣು ಮುಂಚೆ ಇದು ತುಂಬಾ ವಿರಳವಾಗಿತ್ತು. ಆದರೆ, ಈಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತದೆ. ಜ್ಯೂಸ್ ಅಂಗಡಿಗಳಲ್ಲಿ ಕೂಡ ಅವಕ್ಯಾಡೋ ಜ್ಯೂಸ್ ಕೊಡಿ ಎಂದರೆ ಕೊಡುತ್ತಾರೆ. ಇದು ಕೂಡ ನಮ್ಮ ಕೆಟ್ಟ ಕೊಬ್ಬಿನ ಪ್ರಮಾಣವನ್ನು ನಿರ್ವಹಣೆ ಮಾಡಬಲ್ಲದು. ನಿಮ್ಮ ಕೊಲೆಸ್ಟ್ರಾಲ್ ಪ್ರಮಾಣವನ್ನು ತೆಗೆದು ಹಾಕುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.​

ಬಾಳೆಹಣ್ಣು
ನಾರಿನ ಅಂಶ ಅಪಾರವಾಗಿರುವ ಬಾಳೆಹಣ್ಣು ಪೊಟಾಸಿಯಂ ಅನ್ನು ಕೂಡ ಒಳಗೊಂಡಿದೆ. ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿರ್ವಹಣೆ ಮಾಡುವಲ್ಲಿ ಬಾಳೆಹಣ್ಣು ತುಂಬಾ ಒಳ್ಳೆಯದು. ಕರಗುವ ನಾರಿನ ಅಂಶದ ಕಾರಣದಿಂದ ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದ್ರಾಕ್ಷಿ:
ಇದು ಮಾಡುವ ಚಮತ್ಕಾರ ಒಂದೆರಡಲ್ಲ. ದ್ರಾಕ್ಷಿ ಹಣ್ಣಿನಲ್ಲಿ ಒಂದು ಒಳ್ಳೆಯ ಗುಣವಿದೆ. ಅದೇನೆಂದರೆ, ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ಕೊಬ್ಬಿನ ಪ್ರಮಾಣ ಅಡಗಿದೆ ಅದೆಲ್ಲವನ್ನು ರಕ್ತ ಸಂಚಾರದ ಮೂಲಕ ಲಿವರ್ ಭಾಗಕ್ಕೆ ದ್ರಾಕ್ಷಿ ಹಣ್ಣಿನ ರಸ ತೆಗೆದು ಕೊಂಡು ಹೋಗುತ್ತದೆ. ಅಲ್ಲಿ ಅದು ಸಂಸ್ಕರಣೆಯಾಗಿ ಕೆಟ್ಟ ಕೊಬ್ಬಿನ ಪ್ರಮಾಣವನ್ನು ದೇಹದಿಂದ ಹೊರ ಹೋಗಲು ಅನುಕೂಲ ಮಾಡಿ ಕೊಡುತ್ತದೆ.

ಬ್ಲಾಕ್ಬೆರ್ರಿ ಮತ್ತು ಸ್ಟ್ರಾಬೆರಿ
ಬೆರ್ರಿ ಹಣ್ಣುಗಳು ತಮ್ಮಲ್ಲಿ ಅದ್ಭುತವಾದ ಆಂಟಿ ಆಕ್ಸಿಡೆಂಟ್ ಲಕ್ಷಣಗಳನ್ನು ಒಳಗೊಂಡಿವೆ. ಇವು ನಮ್ಮ ದೇಹದಲ್ಲಿ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಬೆರ್ರಿ ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ಇವುಗಳ ಸಂಪೂರ್ಣ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಅನಾನಸ್:
ಅನಾನಸ್(Pineapple] ಹಣ್ಣು ದೇಹದಲ್ಲಿ ಆರೋಗ್ಯಕರವಾದ ರಕ್ತ ಸಂಚಾರ ಮಾಡುವಲ್ಲಿ ನೆರವಾಗುತ್ತದೆ. ಇದು ಕೆಟ್ಟ ಕೊಬ್ಬಿನ ಅಂಶವನ್ನು ನಿಯಂತ್ರಣ ಮಾಡುವ ಗುಣವನ್ನು ಹೊಂದಿದ್ದು, ಹೃದಯದ ಆರೋಗ್ಯಕ್ಕೆ ಹೆಚ್ಚು ಲಾಭಗಳನ್ನು ಕೊಡುತ್ತದೆ. ಕೊಲೆಸ್ಟ್ರಾಲ್ ನಿಂದ ಮುಕ್ತಿ ಹೊಂದಲು ಸೀಸನ್ ಇರುವ ಸಮಯದಲ್ಲಿ ಪೈನಾಪಲ್ ಹಣ್ಣಿನ ಜ್ಯೂಸ್ ಸೇವಿಸಿ.​

ಸಿಟ್ರಸ್:
ಇವುಗಳಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಆರೋಗ್ಯವನ್ನು ಉತ್ತಮ ಪ್ರಮಾಣದಲ್ಲಿ ಕಾಪಾಡಬಲ್ಲವು. ಅಷ್ಟು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಕೊಬ್ಬು ಅಥವಾ ಬೊಜ್ಜಿನ ಅಂಶವನ್ನು ಕರಗಿಸುವಲ್ಲಿ ಯಶಸ್ವಿ ಪಾತ್ರವನ್ನು ವಹಿಸುತ್ತವೆ. ಸಿಟ್ರಸ್ ಹಣ್ಣುಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಸಹ ನಿವಾರಣೆ ಮಾಡುತ್ತದೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿದೆ.

ಡ್ರ್ಯಾಗನ್ ಹಣ್ಣು
ಡ್ರ್ಯಾಗನ್ ಹಣ್ಣು ತನ್ನಲ್ಲಿ ನಾರಿನ ಪ್ರಮಾಣವನ್ನು ಒಳಗೊಂಡಿದೆ ಮತ್ತು ಬೀಟಾಲೈನ್ ಗಳನ್ನು ಸಹ ಹೊಂದಿದೆ. ಇವೆರಡು ಸಹ ಕೊಬ್ಬಿನ ಪ್ರಮಾಣವನ್ನು ಕರಗಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತದೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತವೆ.

ಪ್ಲಮ್ ಮತ್ತು ಪಿಯರ್ ಹಣ್ಣು
ಮುಖ್ಯವಾಗಿ ಇವು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ವಿಚಾರದಲ್ಲಿ ಕೆಲಸ ಮಾಡುತ್ತವೆ. ಹೀಗಾಗಿ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಕೂಡ ಸಾಕಷ್ಟು ಕುಸಿತ ಕಾಣುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇವುಗಳ ಪಾತ್ರ ಮಹತ್ತರವಾದುದು.
(- ಸಂಗ್ರಹ)

Leave a Comment

Your email address will not be published. Required fields are marked *