Ad Widget .

ಆಸ್ಪತ್ರೆಯಿಂದ ಕೊನೆಗೂ ಬಿಡುಗಡೆಗೊಂಡ ಡೀಲ್ ರಾಣಿ ಚೈತ್ರಾ| ಆಲ್ ಈಸ್ ವೆಲ್ ಎಂದು ಡಾಕ್ಟರ್ ಹೇಳಿದ್ರೂ ಬಾಯಲ್ಲಿ ನೊರೆ ಬಂದಿದ್ದೇಕೆ?

ಸಮಗ್ರ ನ್ಯೂಸ್: ವಂಚಕಿ ಚೈತ್ರಾ ಕುಂದಾಪುರ ಕಳೆದ ಮೂರುವರೆ ದಿನಗಳಿಂದ ಅನಾರೋಗ್ಯದ ಹೆಸರಿನಲ್ಲಿ ನಡೆಸಿದ ನಾಟಕ ಇದೀಗ ಬಂದ್‌ ಆಗಿದ್ದು ಆಕೆಯ ದೇಹ ಸ್ಥಿತಿ ನಾರ್ಮಲ್‌ ಆಗಿದೆ. ಆಕೆಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ದೃಢೀಕರಿಸಿ ಆಕೆಯನ್ನು ಡಿಸ್ಚಾರ್ಜ್‌ ಮಾಡಿದ್ದಾರೆ.

Ad Widget . Ad Widget .

ಸೆ.12ರಂದು ಬಂಧಿತಳಾಗಿದ್ದ ಚೈತ್ರಾ ಕುಂದಾಪುರಳನ್ನು ಮರುದಿನ ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸೆ.15ರಂದು ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ನಿಮಿಷದಲ್ಲಿ ಆಕೆ ವಾಷ್‌ ರೂಮ್‌ನಲ್ಲಿ ಬಾಯಿಯಲ್ಲಿ ನೊರೆಯೊಂದಿಗೆ ಬಿದ್ದುಕೊಂಡಿದ್ದಳು. ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಇದು ಆತ್ಮಹತ್ಯೆ ಯತ್ನ ಎಂದೂ, ಬಳಿಕ ಅಪಸ್ಮಾರ ಸಮಸ್ಯೆ ಎಂದು ಸುದ್ದಿಯಾಗಿತ್ತು. ಆದರೆ ಪರೀಕ್ಷೆ ಮಾಡಿದಾಗ ಯಾವುದೇ ಅನಾರೋಗ್ಯವಾಗಲಿ, ವಿಷ ಸೇವನೆಯಾಗಲೀ, ಅಪಸ್ಮಾರದ ಲಕ್ಷಣಗಳಾಗಲೀ ಕಾಣಲಿಲ್ಲ. ಎಲ್ಲ ವೈದ್ಯಕೀಯ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಈ ವೇಳೆ ಆಕೆ ಸಿಸಿಬಿ ಕಚೇರಿಯಲ್ಲಿ ಸಾಬೂನಿನ ನೊರೆಯನ್ನು ಮುಖಕ್ಕೆ ಹಚ್ಚಿ ನಾಟಕ ಮಾಡಿದ್ದಳು ಎಂಬ ಅಂಶ ಬಯಲಾಯಿತು.

Ad Widget . Ad Widget .

ಚೈತ್ರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಕೆ ಯಾವುದೇ ಪ್ರಶ್ನೆಗೆ ಸ.ಪ್ರತಿಕ್ರಿಯಿಸದೆ ಇರುವುದರಿಂದ ಆರೋಗ್ಯ ತಪಾಸಣೆ ಮುಂದುವರಿಸಲಾಗಿತ್ತು. ಮಲ ಮೂತ್ರ ವಾಂತಿ ಸೇರಿದಂತೆ ಎಲ್ಲ ರೀತಿಯ ತಪಾಸಣೆ ನಡೆಸಿದರೂ ಯಾವುದರಲ್ಲೂ ಅನಾರೋಗ್ಯಕ್ಕೆ ಪೂರಕವಾದ ಅಂಶ ಪತ್ತೆಯಾಗಲಿಲ್ಲ. ಆಕೆಯ ಮೆದುಳಿನ ಸ್ಕ್ಯಾನ್‌ ನಡೆಸಲಾಯಿತು. ಆಕೆಗೆ ಎದೆನೋವು ಎಂದು ಹೇಳಿಕೊಂಡಾಗ ಅದನ್ನೂ ತಪಾಸಣೆ ಮಾಡಲಾಯಿತು. ಇದೀಗ ಎಲ್ಲ ರೀತಿಯಿಂದಲೂ ಫಿಟ್‌ ಆಗಿರುವ ಚೈತ್ರಾಳನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ವೇಳೆ ವೈದ್ಯರು ಹೇಳಿದ್ದೇನು?
ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ವಿವರ ನೀಡಿದ ಡಾ. ದಿವ್ಯ ಪ್ರಕಾಶ್‌ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ ಅಂತಾ ಹೇಳಿದ್ದಾರೆ. ಈಗ ಡಿಸ್ಚಾರ್ಜ್‌ ಮಾಡ್ತಾ ಇದ್ದೇವೆʼʼ ಎಂದು ಹೇಳಿದರು.ʼ

ಆಸ್ಪತ್ರೆಗೆ ಬಂದ ವೇಳೆ ಬಾಯಿಯಲ್ಲಿ ಕಂಡ ನೊರೆಯ ಬಗ್ಗೆ ಕೇಳಿದಾಗ, ಅವರೇ ಅದನ್ನು ಮಾಡಿಕೊಂಡಿರುವುದು, ಫಿಟ್ಸ್ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ಬಂದಾಗ ಇಸಿಜಿಯಲ್ಲಿ ಸ್ವಲ್ಪ ವೇರಿಯೇಷನ್ಸ್‌ ಇತ್ತು. ಬಳಿಕ ಅದು ಸರಿಯಾಗಿದೆ. ಮನೋವೈದ್ಯರು ಕೂಡಾ ಕೆಲವು ಮಾತ್ರೆ ಕೊಟ್ಟಿದ್ದಾರೆ. ಎಂದು ವೈದ್ಯರು ವಿವರಿಸಿದರು.

ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಚೈತ್ರಾ ಮೊದಲಿನ ರೀತಿಯಲ್ಲಿ ಇಲ್ಲ. ಆಕೆ ಸುಸ್ತಾದಂತೆ ಕಾಣಿಸುತ್ತಿದ್ದಾರೆ. ಕಾರಿನಲ್ಲಿ ಬಿದ್ದುಕೊಂಡಂತಿದ್ದ ಅವರು ಇಳಿಯಲು ಕಷ್ಟಪಡುವಂತೆ ಕಂಡುಬಂದರು. ಇಳಿದ ಬಳಿಕವೂ ಅವರು ಬಲವಿಲ್ಲದಂತೆ ಮಹಿಳಾ ಸಿಬ್ಬಂದಿಗಳನ್ನು ಊರುಗೋಲಿನಂತೆ ಆಶ್ರಯಿಸಿದರು. ಸಿಸಿಬಿ ಸಿಬ್ಬಂದಿಯೇ ಚೈತ್ರಾಳನ್ನು ಕೈ ಹಿಡಿದು ಕೆಳಗಿಳಿಸಿ ಸಿಸಿಬಿ ಕಚೇರಿಗೆ ಕರೆದೊಯ್ದರು.

ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದೆ. ಮಂಗಳವಾರದಿಂದ ಆಕೆಯ ವಿಚಾರಣೆ ಮತ್ತೆ ಶುರುವಾಗಲಿದೆ.

ಕಳೆದ ಸೆಪ್ಟೆಂಬರ್‌ 12ರಂದು ರಾತ್ರಿ ಉಡುಪಿಯ ಕೃಷ್ಣ ಮಠದ ಸಮೀಪ ಬಂಧಿತಳಾಗಿದ್ದ ಚೈತ್ರಾ ಕುಂದಾಪುರಳನ್ನು ಮರುದಿನ ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್‌ 10 ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಸೆ. 14ರಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಬಂದಿದ್ದ ಆಕೆ ʻಸ್ವಾಮೀಜಿ ಸಿಕ್ಕಾಕಿಕೊಳ್ಳಿ.. ಎಲ್ಲ ದೊಡ್ಡವರ ಹೆಸರು ಹೊರಗೆ ಬರುತ್ತದೆʼʼ ಎಂದು ಹುಳಬಿಟ್ಟಿದ್ದಳು. ಸೆ. 15ರಂದು ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ನಿಮಿಷದಲ್ಲಿ ಆಕೆ ವಾಷ್‌ ರೂಮ್‌ನಲ್ಲಿ ಬಾಯಿಯಲ್ಲಿ ನೊರೆಯೊಂದಿಗೆ ಬಿದ್ದುಕೊಂಡಿದ್ದಳು. ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಮೊದಲು ಇದು ಆತ್ಮಹತ್ಯೆ ಯತ್ನ ಎಂದೂ, ಬಳಿಕ ಅಪಸ್ಮಾರ ಸಮಸ್ಯೆ ಎಂದು ಪ್ರಚಾರ ಪಡೆಯಿತು. ಅರೆಪ್ರಜ್ಞೆಯಲ್ಲಿದ್ದಂತೆ ಇದ್ದ ಚೈತ್ರಾಳನ್ನು ಪರೀಕ್ಷೆ ಮಾಡಿದಾಗ ಯಾವುದೇ ಅನಾರೋಗ್ಯವಾಗಲಿ, ವಿಷ ಸೇವನೆಯಾಗಲೀ, ಅಪಸ್ಮಾರದ ಲಕ್ಷಣಗಳಾಗಲೀ ಕಾಣಲಿಲ್ಲ. ಎಲ್ಲ ವೈದ್ಯಕೀಯ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಆಕೆ ಸಿಸಿಬಿ ಕಚೇರಿಯಲ್ಲಿ ಸಾಬೂನಿನ ನೊರೆಯನ್ನು ಮುಖಕ್ಕೆ ಹಚ್ಚಿ ನಾಟಕ ಮಾಡಿದ್ದಳು ಎಂಬ ಅಂಶ ಬಯಲಾಯಿತು.

ಚೈತ್ರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ..
ಆದರೆ, ಆಕೆ ಯಾವುದೇ ಪ್ರಶ್ನೆ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯಿಸದೆ ಇರುವುದರಿಂದ ಆರೋಗ್ಯ ತಪಾಸಣೆ ಮುಂದುವರಿಸಲಾಗಿತ್ತು. ಮಲ ಮೂತ್ರ ವಾಂತಿ ಸೇರಿದಂತೆ ಎಲ್ಲ ರೀತಿಯ ತಪಾಸಣೆ ನಡೆಸಿದರೂ ಯಾವುದರಲ್ಲೂ ಅನಾರೋಗ್ಯಕ್ಕೆ ಪೂರಕವಾದ ಅಂಶ ಪತ್ತೆಯಾಗಲಿಲ್ಲ. ಆಕೆಯ ಮೆದುಳಿನ ಸ್ಕ್ಯಾನ್‌ ನಡೆಸಲಾಯಿತು. ಆಕೆಗೆ ಎದೆನೋವು ಎಂದು ಹೇಳಿಕೊಂಡಾಗ ಅದನ್ನೂ ತಪಾಸಣೆ ಮಾಡಲಾಯಿತು. ಇದೀಗ ಎಲ್ಲ ರೀತಿಯಿಂದಲೂ ಫಿಟ್‌ ಆಗಿರುವ ಚೈತ್ರಾಳನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ವೇಳೆ ವೈದ್ಯರು ಹೇಳಿದ್ದೇನು?
ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ವಿವರ ನೀಡಿದ ಡಾ. ದಿವ್ಯ ಪ್ರಕಾಶ್‌ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ ಅಂತಾ ಹೇಳಿದ್ದಾರೆ. ಈಗ ಡಿಸ್ಚಾರ್ಜ್‌ ಮಾಡ್ತಾ ಇದ್ದೇವೆʼʼ ಎಂದು ಹೇಳಿದರು.ʼ

ಆಸ್ಪತ್ರೆಗೆ ಬಂದ ವೇಳೆ ಬಾಯಿಯಲ್ಲಿ ಕಂಡ ನೊರೆಯ ಬಗ್ಗೆ ಕೇಳಿದಾಗ, ಅವರೇ ಅದನ್ನು ಮಾಡಿಕೊಂಡಿರುವುದು, ಫಿಟ್ಸ್ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ಬಂದಾಗ ಇಸಿಜಿಯಲ್ಲಿ ಸ್ವಲ್ಪ ವೇರಿಯೇಷನ್ಸ್‌ ಇತ್ತು. ಬಳಿಕ ಅದು ಸರಿಯಾಗಿದೆ. ಮನೋವೈದ್ಯರು ಕೂಡಾ ಕೆಲವು ಮಾತ್ರೆ ಕೊಟ್ಟಿದ್ದಾರೆ. ಎಂದು ವೈದ್ಯರು ವಿವರಿಸಿದರು.

ʻʻಸಿಸಿಬಿ ಅಧಿಕಾರಿಗಳು ಇದ್ದಾರೆ. ತಿಂಡಿ ಆಯ್ತಾ ಅಂತಾ ಮಾತಾಡಿಸಿದ್ದೇವೆ, ಮಾತಾಡಿದ್ರುʼʼ ಎಂದು ಹೇಳಿದರು.

ಸಿಸಿಬಿ ಕಚೇರಿಗೆ ಮರಳಿ ಬಂದಾಗ ಮಹಿಳಾ ಸಿಬ್ಬಂದಿ ಆಧರಿಸಿದರು.
ಮಹಿಳಾ ಸಿಬ್ಬಂದಿಗಳೇ ಊರುಗೋಲು

ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಚೈತ್ರಾ ಮೊದಲಿನ ರೀತಿಯಲ್ಲಿ ಇಲ್ಲ. ಆಕೆ ಸುಸ್ತಾದಂತೆ ಕಾಣಿಸುತ್ತಿದ್ದಾರೆ. ಕಾರಿನಲ್ಲಿ ಬಿದ್ದುಕೊಂಡಂತಿದ್ದ ಅವರು ಇಳಿಯಲು ಕಷ್ಟಪಡುವಂತೆ ಕಂಡುಬಂದರು. ಇಳಿದ ಬಳಿಕವೂ ಅವರು ಬಲವಿಲ್ಲದಂತೆ ಮಹಿಳಾ ಸಿಬ್ಬಂದಿಗಳನ್ನು ಊರುಗೋಲಿನಂತೆ ಆಶ್ರಯಿಸಿದರು. ಸಿಸಿಬಿ ಸಿಬ್ಬಂದಿಯೇ ಚೈತ್ರಾಳನ್ನು ಕೈ ಹಿಡಿದು ಕೆಳಗಿಳಿಸಿ ಸಿಸಿಬಿ ಕಚೇರಿಗೆ ಕರೆದೊಯ್ದರು.

ಇನ್ನು ಮತ್ತೆ ವಿಚಾರಣೆ ಶುರು:
ಸಿಸಿಬಿ ಅಧಿಕಾರಿಗಳು ಆಕೆಯನ್ನು ಈಗ ವಿಚಾರಣೆಗೆ ಒಳಪಡಿಸಬೇಕಾಗಿದೆ. ಉಳಿದ ಐದಾರು ದಿನಗಳ ಕಸ್ಟಡಿಯಲ್ಲಿ ಪೊಲೀಸ್ರು ಚೈತ್ರಳ ವಿಚಾರಣೆ ಮುಗಿಯಬೇಕು. ಸ್ಥಳ ಮಹಜರು, ಉಳಿದ ಆರೋಪಿಗಳನ್ನು ಚೈತ್ರಾ ಎದುರು ಕೂರಿಸಿ ವಿಚಾರಣೆ ನಡೆಸುವ ಪ್ರಕ್ರಿಯೆಗಳು ನಡೆಯಬೇಕು.

Leave a Comment

Your email address will not be published. Required fields are marked *