Ad Widget .

ಬನ್ನೇರುಘಟ್ಟ: ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವು

ಸಮಗ್ರ ನ್ಯೂಸ್: ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದಿದೆ.

Ad Widget . Ad Widget .

ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್‌ ಇದಾಗಿದ್ದು ಬೆಕ್ಕಿನಿಂದ ಹರಡುವ‌ ಮಾರಕ ರೋಗ ಎಂದು ತಿಳಿದುಬಂದಿದೆ. ಮೊದಲಿಗೆ ಆ.22 ರಂದು ಕಾಣಿಸಿಕೊಂಡಿದ್ದು, ಆ.22 ರಿಂದ ಸೆಪ್ಟೆಂಬರ್ 5ರ ಅವಧಿಯಲ್ಲಿ 7 ಚಿರತೆಗಳ ಸಾವು ಕಂಡಿವೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್‌ನಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Ad Widget . Ad Widget .

ರಾಜ್ಯದ ನಾನಾ ಭಾಗಗಳಿಂದ ರೈತರ ಜಮೀನುಗಳ ಬಳಿ ಸಿಕ್ಕಿದ್ದ ಚಿರತೆ ಮರಿಗಳು ಇವಾಗಿದ್ದವು. ಚಿರತೆ ಮರಿಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಮಾರಕ ರೋಗಕ್ಕೆ ತುತ್ತಾಗಿ ಈಗ ಏಳು ಚಿರತೆ ಮರಿಗಳ ಮೃತಪಟ್ಟಿವೆ.
ಒಂದು ವರ್ಷದವರೆಗೆ ಮರಿಗಳಿಗೆ ಯಾವುದೇ ವ್ಯಾಕ್ಸಿನೇಷನ್ ನೀಡುವಂತಿಲ್ಲ. 11 ಜನರ ಕಮಿಟಿ‌ ಮಾಡಿ ಬೂಸ್ಟರ್ ಡೋಸ್ ನೀಡಿ ಕಂಟ್ರೋಲ್‌ ಮಾಡಲು ಕ್ರಮ ವಹಿಸಲಾಗಿತ್ತು. ಸೋಂಕು ತಗುಲಿದ ಬಳಿಕ ಜೀರ್ಣ ಕ್ರಿಯೆ ಆಗದೇ ರಕ್ತ ವಾಂತಿಯಾಗಿ ಪ್ರಾಣ ಬಿಟ್ಟಿವೆ.

Leave a Comment

Your email address will not be published. Required fields are marked *