Ad Widget .

ಸಂಪಾಜೆ: ಮುಹಿಯುದ್ಧಿನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಪುನರಾಯ್ಕೆ

ಸಮಗ್ರ ನ್ಯೂಸ್: ಇತಿಹಾಸ ಪ್ರಸಿದ್ಧವಾದ ಸಂಪಾಜೆ ಗ್ರಾಮದ ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಪುನರಾಯ್ಕೆ.

Ad Widget . Ad Widget .

2006ರಲ್ಲಿ ಪೇರಡ್ಕ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಗೂನಡ್ಕ ಪೇರಡ್ಕ ಮದರಸ ಮಸೀದಿಯ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಟಿ.ಎಂ.ಶಹೀದ್ ಅವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.

Ad Widget . Ad Widget .

ಭಾರತ ಸರಕಾರದ ಕೊಯರ್ ಬೋರ್ಡ್ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ರಾಜ್ಯ ವಕ್ಸ್ ಕೌನ್ಸಿಲ್ ಸದಸ್ಯರಾಗಿ, ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ ದುಡಿದಿರುವ ಅವರು ಪ್ರಸ್ತುತ ಕೆಪಿಸಿಸಿ ಮುಖ್ಯ ವಕ್ತಾರರಾಗಿ, ತೆಕ್ಕಿಲ್ ಪ್ರತಿಷ್ಟಾನದ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ಹಲವು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದು, ಸಂಪಾಜೆ ಗ್ರಾಮದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.

ಪೇರಡ್ಕದ ದರ್ಗಾ ಶರೀಪ್ ಗೆ, ಮಸೀದಿಗೆ ಹೋಗಲು ರಸ್ತೆ, ಮಸೀದಿ, ಮದರಸ, ದರ್ಗಾ ಮತ್ತು ವಕ್ಸ್ ಸ್ವತ್ತುಗಳ ರಕ್ಷಣೆಗಾಗಿ ಆವರಣಗೋಡೆಯ ರಚನೆ. ರೂ. 60ಲಕ್ಷ ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯಿಂದ ಪೇರಡ್ಕದಲ್ಲಿ ಯಾತ್ರಿಭವನ ನಿರ್ಮಾಣ, ಗೂನಡ್ಕದಿಂದ ದರ್ಖಾಸ್ತು ಪೆರುಂಗೋಡಿ ಪೇರಡ್ಕ ರಸ್ತೆ ಮತ್ತು ಸೇತುವೆ ನಿರ್ಮಾಣ ಮುಂತಾದ ಅನೇಕ ಅಭಿವೃದ್ಧಿ ಕೆಲಸಗಳೊಂದಿಗೆ ಮಸೀದಿಯ ಆಡಳಿತ ಮತ್ತು ಊರಿನ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಇವರ ತಂದೆ ಟಿ.ಎಂ. ಬಾಬ ಹಾಜಿ ತೆಕ್ಕಿಲ್, ಅಜ್ಜ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ದೀರ್ಘ ಕಾಲ ಮಸೀದಿಯ ಅಧ್ಯಕ್ಷರಾಗಿ ಮಸೀದಿ ಪುನರ್ ನಿರ್ಮಾಣ ಮತ್ತು ಪೇರಡ್ಕ ದರ್ಗಾ ಅಭಿವೃದ್ಧಿಗೆ ದುಡಿದಿದ್ದು, ಕೃಷಿ ಸ್ಥಳವನ್ನು ನೀಡಿದ್ದಾರೆ.

ಮಸೀದಿಯ ಗೌರವಾಧ್ಯಕ್ಷರಾಗಿ ಟಿ.ಇ. ಆರಿಫ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿಯಾಗಿ, ಪಿ.ಕೆ.ಉಮ್ಮರ್ (ಜಡ್ಜ್) ಗೂನಡ್ಕ, ಕೋಶಾಧಿಕಾರಿಯಾಗಿ ಪಿ.ಎ.ಮಹಮ್ಮದ್ ಕುಂಞ ತೆಕ್ಕಿಲ್ ಪೇರಡ್ಕ, ಉಪಾಧ್ಯಕ್ಷರಾಗಿ ಟಿ.ಬಿ.ಹನೀಫ್ ತೆಕ್ಕಿಲ್ ಹಾಗೂ ಜಿ.ಎಂ.ಇಬ್ರಾಹಿಂ ಶೆಟ್ಯಡ್ಕ ಪೇರಡ್ಕ, ಜೊತೆಕಾರ್ಯದರ್ಶಿಗಳಾಗಿ ಕೆ.ಎಂ.ಉಸ್ಮಾನ್ ಮತ್ತು ಪಿ.ಎ. ಸಿನಾನ್ (ಜಡ್ಜ್) ಗೂನಡ್ಕ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಎಸ್.ಆಲಿ ಹಾಜಿ, ಪಾಂಡಿ ಅಬ್ಬಾಸ್, ಪಾಂಡಿ ಉಸ್ಮಾನ್, ಡಿ.ಎ.ಮೊಯಿದು, ಇಬ್ರಾಹಿಂ ಬಾತಿಷ ಶೆಟ್ಯಡ್ಕ, ಸಾಜಿದ್ ಐ.ಜಿ.ಗೂನಡ್ಕ ಆಯ್ಕೆಯಾಗಿದ್ದಾರೆ.

Leave a Comment

Your email address will not be published. Required fields are marked *