Ad Widget .

ಮಡಿಕೇರಿ: ವ್ಯಕ್ತಿಯ ಅಪಹರಿಸಿ 5 ಲಕ್ಷ ರೂ. ಬೇಡಿಕೆ : 14 ಮಂದಿ ಆರೋಪಿಗಳ ಬಂಧನ

ಸಮಗ್ರ ನ್ಯೂಸ್:‌ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿ 5 ಲಕ್ಷ ರೂ. ಬೇಡಿಕೆಯಿಟ್ಟಿದ್ದ 14 ಮಂದಿ ಆರೋಪಿಗಳನ್ನು ಮಡಿಕೇರಿ ಪೊಲೀಸರು ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಡಿಕೇರಿ ಕಾನ್ವೆಂಟ್ ಜಂಕ್ಷನ್ ನಿವಾಸಿ ಎಂ. ಜೆಡ್. ಮಹಮ್ಮದ್ ರಾಶಿದ್ (41), ಮಡಿಕೇರಿ ಗೌಳಿಬೀದಿಯ ಎಂ. ಜಿ. ಪ್ರಮೋದ್ (31), ಟಿ. ಆರ್. ದರ್ಶನ್ (48), ಮಡಿಕೇರಿ ಚಾಮುಂಡೇಶ್ವರಿ ನಗರದ ಬಿ. ಡಾಲಿ (48), ಮಕ್ಕಂದುರುವಿನ ಜೀವನ್ ಕುಮಾರ್ (25), ಮಹದೇವಪೇಟೆಯ ಟಿ. ಪಿ. ಮದನ್ ರಾಜ್ (34), ಕಡಗದಾಳುವಿನ ಎಸ್. ದರ್ಶನ್ (24), ಎಂ. ಆರ್. ಮಣಿಕಂಠ (24), ಮದೆನಾಡಿನ ಎಂ. ಜೆ. ಪುರುಷೋತ್ತಮ್ (21), ಮಡಿಕೇರಿ ಮಂಗಳಾದೇವಿ ನಗರದ ಎಸ್. ಎಸ್. ಕಿರಣ್ ರೈ (32), ಗಾಳಿಬೀಡಿನ ಪಿ. ಎಸ್. ಮಂಜು (23), ಇಬ್ಬನಿವಳವಾಡಿಯ ಟಿ.ಎಸ್. ಕೀರ್ತಿ (31), ಮಡಿಕೇರಿ ವಿದ್ಯಾನಗರದ ಎಸ್. ಸಂದೀಪ್ (37), ಮಡಿಕೇರಿ ಕಾನ್ವೆಂಟ್ ಜಂಕ್ಷನ್ ನ ತಬಸ್ಯ (36), ಎಂಬುವವರುಗಳೇ ಬಂಧನಕ್ಕೊಳಗಾಗಿರುವ ಆರೋಪಿಗಳಾಗಿದ್ದಾರೆ.

Ad Widget . Ad Widget . Ad Widget .

ಬಾವಿ ಕೆಲಸ ಮಾಡಿಕೊಂಡಿರುವ ಮಡಿಕೇರಿ ಗೌಳಿಬೀದಿಯ ನಿವಾಸಿಯಾಗಿರುವ ನಿಜಾಮುದ್ದಿನ್ ಎಂಬುವವರು ತಾ.15ರಂದು ಬೆಳಗ್ಗೆ 7.30 ರ ಸಮಯದಲ್ಲಿ ವಿದ್ಯಾನಗರದ ರಾಶಿದ್ ಎಂಬುವವರ ಮನೆಯಲ್ಲಿ ಸ್ಯಾನಿಟರಿ ಕೆಲಸವಿರುವುದಾಗಿ ಹೇಳಿ ತೆರಳಿದ್ದಾರೆ. ಗುಂಡಿ ಕೆಲಸ ಯಾವುದೆಂದು ನೋಡುತ್ತಿದ್ದಾಗ ನಿಜಾಮುದ್ದಿನ್ ರವರ ಕೈ ಆಕಸ್ಮಿಕವಾಗಿ ಮಹಮ್ಮದ್ ರಾಶಿದ್ ರವರ ಪತ್ನಿ ತಬಸ್ಯಾರವರಿಗೆ ತಗಲಿದೆ ಎನ್ನಲಾಗಿದೆ. ವಿಚಾರ ತಿಳಿದು ಮಹಮ್ಮದ್ ರಾಶಿದ್ ಮತ್ತು ಅವರ ತಂಡದವರು ನಿಜಾಮುದ್ದಿನ್ ರವರ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಮನೆಗೆ ಹಿಂತಿರುಗಿ ಬಂದ ನಿಜಾಮುದ್ದಿನ್ ಮಗ ಸೈಪುದ್ದಿನ್ ಗೆ ವಿಷಯ ತಿಳಿಸಿದ್ದಾರೆ. ಇದಾದ ಬಳಿಕ ಆರೋಪಿಗಳು ಗೌಳಿ ಬೀದಿಯಲ್ಲಿ ಹೋಗುತ್ತಿದ್ದ ನಿಜಾಮುದ್ದಿನ್ ರವರನ್ನು ಅಪಹರಿಸಿ ಮಂಗಳದೇವಿ ನಗರದ ಎನ್. ಎಸ್. ಕಿರಣ್ ರೈ ಎಂಬಾತನ ಮನೆಯಲ್ಲಿ ಕೂಡಿಟ್ಟು ಹಲ್ಲೆ ಮಾಡಿದ್ದಾರೆ. ನಿಜಾಮುದ್ದಿನ್ ರವರಿಂದ ಅವರ ಪತ್ನಿಗೆ ವಾಟ್ಸಪ್ ಕರೆ ಮಾಡಿಸಿ ರೂ. ಹತ್ತು ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ವಿಷಯ ಅರಿತ ನಿಜಾಮುದ್ದಿನ್ ರವರ ಮಗ ಸೈಫುದ್ದಿನ್ ಅಪಹರಣಕಾರರು ನೀಡಿದ್ದ ಮೊಬೈಲ್ ಗೆ ರೂ. ಹತ್ತು ಸಾವಿರ ಕಳುಹಿಸಿದ್ದಾರೆ. ಇಷ್ಟಕ್ಕೂ ತೃಪ್ತರಾಗದ ಅಪಹರಣಕಾರರು ಹಲ್ಲೆ ಮಾಡಿರುವುದನ್ನು ವಿಡಿಯೋ ಕಾಲ್ ಮೂಲಕ ಸೈಫುದ್ದಿನ್ ಗೆ ತೋರಿಸಿ ರೂ. 5 ಲಕ್ಷ ಹಣವನ್ನು ರಾತ್ರಿ 12 ಗಂಟೆಯೊಳಗೆ ನೀಡುವಂತೆಯೂ ಇಲ್ಲವಾದಲ್ಲಿ ನಿಜಾಮುದ್ದಿನ್ ರವರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಹೀಗಾಗಿ ಸೈಫುದ್ದಿನ್ ರವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದಾರೆ. ಕಾರ್ಯಾಚರಣೆಗೆ ಇಳಿದ ಪೊಲೀಸರು ಮಂಗಳದೇವಿ ನಗರದ ಎನ್. ಎಸ್. ಕಿರಣ್ ರೈ ಎಂಬಾತನ ಮನೆಯಲ್ಲಿ ಕೂಡಿ ಹಾಕಿದ್ದ ನಿಜಾಮುದ್ದಿನ್ ರವರನ್ನು ಪತ್ತೆಹಚ್ಚಿ 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರುಗಳು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಗಳು, ನಾಲ್ಕು ಚಕ್ರ ವಾಹನಗಳು (ಎರಡು), ಒಂದು ಆಟೋ ರಿಕ್ಷಾ,, 3 ದ್ವಿಚಕ್ರ ವಾಹನಗಳು,, ಒಂದು ಎಸ್ ಬಿ ಬಿ ಎಲ್, 1 ಏರ್ ಪಿಸ್ತುಲ್, ಒಂದು ಟಾಯ್ ಪಿಸ್ತುಲ್ ಹಾಗೂ ಎರಡು ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *