Ad Widget .

ಬೀದಿನಾಯಿ ಮೇಲೆ ಅತ್ಯಾಚಾರ ಎಸಗಿದ ವಿಕೃತಕಾಮಿ| ಸಿಸಿ ಟಿವಿಯಲ್ಲಿ ದೃಶ್ಯ‌ ಸೆರೆ

ಸಮಗ್ರ ನ್ಯೂಸ್: ಕಾಮುಕನೊಬ್ಬ ನಾಯಿಯ ಮೇಲೆ ಅತ್ಯಾಚಾರವೆಸಗಿದ ಅಮಾನುಷ ಘಟನೆಯೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಈ ಪಾಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Ad Widget . Ad Widget .

ಪವನ್ ಮಲ್ಹೋತ್ರಾ ಎಂಬಾತನೇ ಈ ಕೃತ್ಯ ಎಸಗಿದ ಕಾಮುಕ. ಈತ ಖಾಸಗಿ ಸಂಸ್ಥೆಯೊಂದರಲ್ಲಿ ಉತ್ತಮ ಹುದ್ದೆಯಲ್ಲಿದ್ದ ಎನ್ನಲಾಗಿದೆ. ಈತನು ಶ್ವಾನದ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದನ್ನು ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

Ad Widget . Ad Widget .

ಹಲವಾರು ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದು ದೇಶದಲ್ಲಿ ಹೆಣ್ಣು ಪ್ರಾಣಿಗಳೂ ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಡಿಯೋದಲ್ಲಿ ಅರೆಬೆತ್ತಲೆಯಾಗಿದ್ದ ಪವನ್ ಮಲ್ಹೋತ್ರಾ ತನ್ನ ಕುಕೃತ್ಯವನ್ನು ನಡೆಸಿದ್ದಾರೆ. ಇದು ಪ್ರಾಣಿಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

ಆರೋಪಿ ಪವನ್​ ವಿರುದ್ಧ ಭಾರತೀಯ ದಂಡ ಸಂಹಿತೆ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಬಿ ಹೆಸರಿನ ಪೀಪಲ್​ ಫಾರ್​​ ಎನಿಮಲ್ಸ್​ ಸದಸ್ಯರೊಬ್ಬರು ರಜೌರಿ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ಸೆಪ್ಟೆಂಬರ್​ 14ರಂದು ಎಫ್​ಐಆರ್​ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *