ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ಗುಡಿಯ ಬಳಿ ಮರ ಬಿದ್ದು ಶೌಚಾಲಯದ ಮೇಲ್ಛಾವಣಿಯ ಜಖಂಗೊಂಡಿದ್ದು, ಇದರಿಂದ ಸಾರ್ವಜನಿಕ ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿದೆ.
ಕಳೆದ ಬಾರಿ ಪಾದಯಾತ್ರಿಕರ ಅನುಕೂಲಕ್ಕಾಗಿ ಹಾಗೂ ಅಣ್ಣಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡುವ ಪ್ರವಾಸಿಗರಿಗಾಗಿ ಶೌಚಾಲಯಕ್ಕೆ ಸರಿಯಾದ ಮೇಲ್ಛಾವಣಿಯನ್ನು ನೂತನವಾಗಿ ನಿರ್ಮಿಸಿ ಸರ್ಕಾರದ ವತಿಯಿಂದ ದುರಸ್ತಿ ಪಡಿಸಲಾಗಿತ್ತು.
ಕಳೆದ ಕೆಲವು ತಿಂಗಳ ಹಿಂದೆ ಪಕ್ಕದಲ್ಲಿದ್ದ ಮರವು ಮೇಲ್ಛಾವಣಿ ಮೇಲೆ ಉರುಳಿ ಮೇಲ್ಛಾವಣಿ ಜಖಂಗೊಂಡಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿಗಳು ಸಂಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರಿಗೆ, ಪಾದಯಾತ್ರಿಕರಿಗೆ ಹೈಟೆಕ್ ಶೌಚಾಲಯದ ಅಗತ್ಯವಿದೆ. ಘಾಟ್ ನಲ್ಲಿ ಒಂದೇ ಶೌಚಾಲಯ ಇರುವುದರಿಂದ ಎಲ್ಲರಿಗೂ ಅನುಕೂಲವಾಗುವಂತೆ ದುರಸ್ತಿ ಪಡಿಸಿ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.