Ad Widget .

ಚೈತ್ರಾ ಕುಂದಾಪುರ ಪ್ರಕರಣ| 3 ಕೋಟಿ ಆರು ಭಾಗ ಮಾಡಿದ್ದು ಹೇಗೆ..? ಇಲ್ಲಿದೆ ಫುಲ್‌ ಮಾಹಿತಿ

ಸಮಗ್ರ ನ್ಯೂಸ್: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‍ಗಾಗಿ 5 ಕೋಟಿ ಡೀಲ್ ಮಾಡಿದ ನಾಯಕಿ ಚೈತ್ರಾ ಕುಂದಾಪುರ 3 ಕೋಟಿಯನ್ನು ಯಾವ ರೀತಿ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Ad Widget . Ad Widget .

ಚೈತ್ರಾ ಮತ್ತು ಗ್ಯಾಂಗ್ ಅಲಿಯಾಸ್ ಕಬಾಬ್ ಗ್ಯಾಂಗ್ ಒಬ್ಬ ಬಕ್ರಾ ಸಿಕ್ಕಿದ ಅಂತ ಚೆನ್ನಾಗಿ ಸುಲಿಗೆ ಮಾಡಿದ್ದ ಗ್ಯಾಂಗ್ ಇದು. ಎಂಎಲ್‍ಎ ಆಗ್ತೀನಿ ಅಂತ ಹಗಲು ಕನಸನ್ನೇ ಕಾಣುತ್ತಾ ಇದ್ದ ಗೋವಿಂದ ಬಾಬು ಪೂಜಾರಿ ಕೋಟಿ ಕೋಟಿ ಹಣ ಪಡೆದು ಮೂರು ನಾಮ ಹಾಕಿದ್ರು. ಇದು ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಗೋವಿಂದಣ್ಣ ಕಿಸೆಯಲ್ಲಿ ಕದ್ದ ಕಾಸನ್ನ 6 ಭಾಗ ಮಾಡಿ ಹರಿದು ಹಂಚಿಕೊಂಡಿದ್ರು. ಇನ್ನೊಂದು ಟ್ವಿಸ್ಟ್ ಅಂದ್ರೆ ಕಥಾನಾಯಕಿ ಚೈತ್ರಾಗೆ ಜಾಯಿಂಟ್ ಆಕೌಂಟ್ ಇತ್ತು ಅನ್ನೋದು ಚೈತ್ರಾ ಮತ್ತು ಶ್ರೀಕಾಂತ್ ತಮಗೆ ಬಂದ ಹಣವನ್ನು ಜಾಯಿಂಟ್ ಅಕೌಂಟ್ ಅಲ್ಲಿ ಇಟ್ಟುಕೊಂಡಿದ್ರು.

Ad Widget . Ad Widget .

ಏನಾಯ್ತು‌ 3 ಕೋಟಿ ಹಣ?: ಚೈತ್ರಾ ಮತ್ತು ಶ್ರೀಕಾಂತ್ ಹೆಸರಲ್ಲಿ 1 ಕೋಟಿ 8 ಲಕ್ಷ ಎಫ್‍ಡಿ, ಚೈತ್ರಾಳ ಬ್ಯಾಂಕ್ ಲಾಕರ್‍ನಲ್ಲಿ 40 ಲಕ್ಷ ನಗದು, ಚೈತ್ರಾಳ ಮತ್ತೊಂದು ಲಾಕರ್‍ನಲ್ಲಿ 23 ಲಕ್ಷದ ಚಿನ್ನದ ಬಿಸ್ಕೆಟ್, ಹೊಸದಾಗಿ ಮನೆ ಕಟ್ಟಿಸೋಕೆ 40 ಲಕ್ಷ, ಚೈತ್ರಾಳ ಅಕ್ಕನ ಮನೆ ಸರಿ ಮಾಡಿಸೋಕೆ 15 ಲಕ್ಷ, ಚೈತ್ರಾಳ ಹೊಸ ಕಿಯಾ ಕಾರು 12 ಲಕ್ಷ (ಉಳಿದದ್ದು ಸಾಲ), ಗಗನ್ ಕಡೂರ್ ಮದುವೆಗೆ 35 ಲಕ್ಷ, ಗಗನ್ ಕಡೂರ್ ಕಾರಿನ ಬೆಲೆ 10 ಲಕ್ಷ, ರಮೇಶ್‍ಗೆ (ವಿಶ್ವನಾಥ್ ಜಿ) 1 ಲಕ್ಷದ 50 ಸಾವಿರ, ಚೆನ್ನನಾಯ್ಕ್ ಗೆ 1 ಲಕ್ಷ (93 ಸಾವಿರ ನಗದು), ಪ್ರಜ್ವಲ್‍ಗೆ 10 ಲಕ್ಷ ಹಣ, ಅಭಿನವ ಹಾಲಾಶ್ರೀಗೆ ನೀಡಿದ ಹಣ 1.5 ಕೋಟಿ ಹಂಚಿಕೆಯಗಿದೆ. ಹೀಗೆ 5 ಕೋಟಿ ಹಣವನ್ನು ಎಷ್ಟೊಂದು ಪಾಲು ಮಾಡಿ ಹಂಚಿಕೊಂಡಿದ್ದಾರೆ. ಇನ್ನು ಜಾಯಿಂಟ್ ಅಕೌಂಟ್ ಎಫ್‍ಡಿ, ಚಿನ್ನದ ಬಿಸ್ಕೆಟ್, 40 ಲಕ್ಷ ನಗದು, ಮುಧೋಳದಲ್ಲಿ ಇದ್ದ ಕಿಯಾ ಕಾರು ಇದೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಪ್ರಕಾರ 2 ಕೋಟಿ ಅಷ್ಟು ರಿಕವರಿ ಆಗಿದೆ.

ಈ ಪ್ರಕರಣದಲ್ಲಿ ಇನ್ನುಳಿದವರ ಬಳಿ ಹಣ ರಿಕವರಿ ಮಾಡಬೇಕಿದ್ದು, ತಲೆಮರೆಸಿಕೊಂಡಿರೋ ಸ್ವಾಮೀಜಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.‌

Leave a Comment

Your email address will not be published. Required fields are marked *