ಪಾದರಕ್ಷೆಯಲ್ಲಿ ಪತ್ತೆಯಾದ ನಾಗರ ಹಾವನ್ನು ರಕ್ಷಣೆ ಮಾಡಿದ ಸ್ನೇಕ್ ಸುರೇಶ್ ಪೂಜಾರಿ ‌.

ಸಮಗ್ರ ನ್ಯೂಸ್: ಸಿದ್ದಾಪುರ ಸಮೀಪದ ನೆಲ್ಯಾಹುದಿಕೇರಿ ಗ್ರಾಮದ ಶಾಲಿವರ ಮನೆಯಲ್ಲಿ ಪಾದರಕ್ಷೆ(ಶೂ)ಒಳಗೆ ಅಡಗಿದ್ದ ನಾಗರ ಹಾವನ್ನು ಸ್ನೇಕ್ ಸುರೇಶ್ ಪೂಜಾರಿ ಸುರಕ್ಷಿತವಾಗಿ ಸೆರೆಹಿಡಿದು ಸೆ.16 ರಂದು ಅರಣ್ಯಕ್ಕೆ ಬಿಡಲಾಯಿತು.

Ad Widget ... ..

ಇಂದು ಮುಂಜಾನೆ ಕೆಲಸಕ್ಕೆ ತೆರಳಲು ಶೂ ಹಾಕಲು ತೆಗೆದಾಗ ಅದರಲ್ಲಿ ಉರಗ ಪತ್ತೆಯಾಗಿದೆ ತಕ್ಷಣವೇ ಉರಗ ರಕ್ಷಕ ಸ್ನೆಕ್ ಸುರೇಶ್ ಗೆ ಮಾಹಿತಿ ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಸುರೇಶ್ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

Ad Widget

ಹಾಗೆಯೇ ಶಾಲೆ, ಕಛೇರಿ,ಕೆಲಸಕ್ಕೆಂದು ತರಾತುರಿಯಲ್ಲಿ ಶೂ ಹಾಕುವಾಗ ಎಚ್ಚರ ವಹಿಸಬೇಕು ಹಾಗೂ ಹಾವು ಪತ್ತೆಯಾದರೆ ಒಡೆದು ಕೊಲ್ಲದೆ ತಮಗೆ ಕರೆಮಾಡುವಂತೆ ಸುರೇಶ್ ರವರು ಮನವಿ ಮಾಡಿದರು.

Leave a Comment

Your email address will not be published. Required fields are marked *