ವಿಷವೆಂದು ಜ್ಯೂಸ್ ಕುಡಿದು ಆತಂಕ ಸೃಷ್ಟಿಸಿದ್ದ ಚೈತ್ರಾ ಕುಂದಾಪುರ| ಸಿಸಿ ಟಿವಿಯಲ್ಲಿ ಬಯಲಾಯ್ತು ಡೀಲ್ ರಾಣಿ ನಾಟಕ

ಸಮಗ್ರ ನ್ಯೂಸ್: ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಹೀಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಬಣ್ಣ ಬಗೆದಷ್ಟು ಬಯಲಾಗುತ್ತಿದೆ.

Ad Widget ... ..

ಕಳೆದ ಎಪ್ರಿಲ್ 24 ರಂದು ಚೈತ್ರಾ ಎಂಡ್ ಗ್ಯಾಂಗ್ ಉದ್ಯಮಿ ಮಂಗಮ್ಮನಪಾಳ್ಯದಲ್ಲಿರುವ ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡ್ತಾರೆ. ಈ ವೇಳೆ ಹಣ ವಾಪಸ್‌ ಕೊಡೋ ಬಗ್ಗೆ ಮಾತುಕಥೆ ನಡೆದಿದೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.

Ad Widget

ಈ ವೇಳೆ ಗೋವಿಂದಾ ಬಾಬು ಕಚೇರಿಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಬ್ಯಾಗ್ ನಿಂದ ವಿಷದ ಬಾಟಲ್ ತೆಗೆದು ಈ ವೇಳೆ ಗಗನ್ ಕಡೂರು ನಾಟಕ ಆಡಿದ್ದಾನೆ. ವಿಷ ಕುಡಿದು ಗಗನ್ ಕಡೂರು ಕುಸಿದು ಬೀಳ್ತಾನೆ. ಅಲ್ಲೆ ಇದ್ದಾ ಚೈತ್ರಾ ಕೂಡ ಅಯ್ಯೋ ದೇವ್ರೇ ಎಂದು ನಾಟಕ ಮಾಡ್ತಾಳೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಈ ಟೀಂ ಬಂದಿತ್ತು. ಎಂದು ಹೇಳಲಾಗಿದೆ.

ಜೊತೆಗೆ ಚೈತ್ರಾ ಅವರು ಕೂಡ ಜ್ಯೂಸ್ ಕುಡಿದು ವಿಷ ಕುಡಿದಂತೆ ನಟಿಸಿದ್ದಾರೆ. ಇವೆಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Comment

Your email address will not be published. Required fields are marked *