ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ಸುತ್ತಮುತ್ತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಮಳೆಯ ಪರಿಣಾಮ ಚಾರ್ಮಾಡಿ ಘಾಟ್ ನಲ್ಲಿ ಮಂಜು ಮುಸುಕಿದ ವಾತಾವರಣವಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ರಾತ್ರಿ ನೀರಿನ ಬಾಟಲ್ ತುಂಬಿದ ಲಾರಿ ಒಂದು ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಾಗಿಲ್ಲ.
ಪ್ರಾಣ ಉಳಿಸಿದ ಮರ:
ಲಾರಿ ಬಿದ್ದ ಜಾಗದಲ್ಲಿ ಬೃಹತಾಕಾರದ ಮರವಿದ್ದು ಆ ಮರಕ್ಕೆ ಲಾರಿ ತಗಲಿ ನಿಂತಿದೆ. ಆ ಮರ ಇಲ್ಲದಿದ್ದರೆ ಸಾವಿರ ಅಡಿ ಪ್ರಪಾತಕ್ಕೆ ಲಾರಿ ಹೋಗಿ ಬೀಳುತ್ತಿತ್ತು. ಈ ಘಟನೆ ಚಾರ್ಮಾಡಿ ಘಾಟ್ನ ಸೋಮನ ಕಾಡು ಸಮೀಪ ನಡೆದಿದೆ.