ಸಮಗ್ರ ನ್ಯೂಸ್: ಪ್ರತಿಯೊಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ.ನಮ್ಮ ಸಂಸ್ಕೃತಿಯಲ್ಲಿ ಈ ಹಿರಿಯರ ಸ್ಥಾನವನ್ನು ತುಂಬುವವರು ಅಜ್ಜ ಅಜ್ಜಿ.ಸಂಸಾರದ ದೋಣಿಯನ್ನು ದಡ ಮುಟ್ಟಿಸಿ,ಕುಟುಂಬದ ಜೊತೆ ಕಾಲ ಕಳೆಯುತ್ತಾ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅಜ್ಜ ಅಜ್ಜಿಯರು ಪ್ರತಿಯೊಂದು ಮನೆಯ ನಿಜವಾದ ಆಸ್ತಿ. ಅಂತಹ ಅರ್ತಗರ್ಭಿತವಾದ ಆಚರಣೆಯನ್ನು ಸೆ. 16ರಂದು ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯರಾದ ಚಂದ್ರಶೇಖರ್ ಅವರು ಭಾಗವಹಿಸಿದ್ದರು. ಅದೇ ರೀತಿ ಸಂಸ್ಥೆಯ ಪುಟಾಣಿ ಮಕ್ಕಳ ಅಜ್ಜ ಅಜ್ಜಿಯಂದಿರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.
ಅಜ್ಜ ಅಜ್ಜಿಯಂದಿರಿಗೆ ಲಿಂಬೆ ಚಮಚ ಹಾಗೂ ಸಂಗೀತ ಕುರ್ಚಿ ಆಟಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಅಜ್ಜ ಅಜ್ಜಿಯಂದಿರು ಉತ್ಸಾಹದಿಂದ ಭಾಗವಹಿಸಿದರು. ಹಾಗೂ ಎಲ್ಲಾ ಅಜ್ಜಿಯರು ತಮ್ಮ ಕೈರುಚಿಯ ಕೈತ್ತುತ್ತನ್ನು ಪುಟಾಣಿಗಳಿಗೆ ನೀಡಿ ಸಂಭ್ರಮಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಅವರು ವಹಿಸಿದ್ದರು. ಕೊನೆಯಲ್ಲಿ ಅಜ್ಜಿಯಂದಿರು ಮುದ್ದು ಮಕ್ಕಳಿಗೆ ಕಥೆ ಹೇಳಿ ಸಂತೋಷಪಟ್ಟರು.