ದ.ಕ ಜಿಲ್ಲೆಯಾದ್ಯಂತ ಸೆ.19ಕ್ಕೆ ಗಣೇಶ ಚತುರ್ಥಿ ರಜೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.18ರ ಬದಲು ಸೆ.19ರಂದು ರಜೆ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Ad Widget ... ..

ಎಂಎಲ್ಸಿ ಕೆ.ಪ್ರತಾಪಸಿಂಹ ನಾಯಕ್ ಅವರ ಪತ್ರದೊಂದಿಗೆ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದ ಟಿಪ್ಪಣಿಯಲ್ಲಿ, ಮಂಗಳವಾರ ರಜೆ ಘೋಷಿಸುವುದರಿಂದ ಈ ಪ್ರದೇಶವು ಹಬ್ಬವನ್ನು ಆಚರಿಸಲು ಸಹಾಯ ಮಾಡುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Ad Widget

ದ.ಕ. ಜಿಲ್ಲೆಯಾದ್ಯಂತ ಸರಕಾರಿ ರಜೆಯನ್ನು ಸೆ. 18ರ ಬದಲು 19ರಂದು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *