Ad Widget .

ಇಂದಿನಿಂದ ಶಾಲಾ – ಕಾಲೇಜುಗಳಲ್ಲಿ ‘ಸಂವಿಧಾನ ಓದು’ ಆರಂಭ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಈಗಾಗಲೇ ಸಂವಿಧಾನ ಪೀಠಿಕೆ ಓದು ಶಾಲಾ ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿತ್ತು. ಅಲ್ಲದೇ ಸಂವಿಧಾನ ಪೀಠಿಕೆ ಓದು ಪರಿಪಾಠವನ್ನು ಸೆ.15ರಿಂದ ಆರಂಭಿಸೋದಾಗಿ ತಿಳಿಸಿತ್ತು. ಅದರಂತೆ ಇಂದಿನಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಓದು ಆರಂಭಗೊಳ್ಳಲಿದೆ.

Ad Widget . Ad Widget .

ಈ ಬಗ್ಗೆ ಕೆಲ ದಿನಗಳ ಹಿಂದೆಯೇ ರಾಜ್ಯ ಸರ್ಕಾರ ಸುತ್ತೋಲೆ ಕೂಡ ಹೊರಡಿಸಿತ್ತು. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಫಲಕದಲ್ಲಿ ಅವಳಡಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿತ್ತು.

Ad Widget . Ad Widget .

ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವಂತಹ ಸಂವಿಧಾನ ಪೀಠಿಕೆ ಅದರ ಆತ್ಮವಾಗಿದೆ. ಹೀಗಾಗಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಕಾನೂನು ಇಲಾಖೆಯ ಕೇಂದ್ರದಿಂದ ಸಂವಿಧಾನ ಪೀಠಿಕೆಯನ್ನು ಖರೀದಿಸಿ ಕಾಲೇಜಿನಲ್ಲಿ ಫಲಕ ಪ್ರಕಟಿಸಬೇಕು ಎಂದು ಹೇಳಿತ್ತು.

ಸಂವಿಧಾನ ಅಮೃತ ಮಹೋತ್ಸವದ ಅಂಗವಾಗಿ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಸಂವಿಧಾಣ ಪೀಠಿಕೆ ಅಳವಡಿಸಬೇಕೆಂದು ಸೂಚನೆ ನೀಡಲಾಗಿತ್ತು. ಅದರಂತೆ ಸೆಪ್ಟೆಂಬರ್.15ರ ಇಂದಿನಿಂದ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದು ಆರಂಭಗೊಳ್ಳಲಿದೆ.

Leave a Comment

Your email address will not be published. Required fields are marked *