Ad Widget .

ಸುಬ್ರಹ್ಮಣ್ಯ:ಆತ್ಮಹತ್ಯೆಯಿಂದ ಹೊರಬರಲು ಒತ್ತಡ ರಹಿತ ಜೀವನವನ್ನು ರೂಡಿಸಿಕೊಳ್ಳಿ: ಡಾ.ಅವಿನ್.ಡಿ.ಪಿ.

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ, ಆಂಗ್ಲ ಭಾಷಾ ವಿಭಾಗ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಆತ್ಮಹತ್ಯೆ ತಡೆ ದಿನದ ಪ್ರಯುಕ್ತ ಸೆ. 11 ರಂದು ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಾತ್ರಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ದೆಹಲಿ ಇಲ್ಲಿನ ಸರ್ಜನ್ ಡಾ. ಅವಿನ್ ಡಿ.ಪಿ.ಅವರು ಆಧುನಿಕ ಜಂಜಾಟದ ಬದುಕಿನಲ್ಲಿ ಪ್ರತಿಯೊಬ್ಬರು ಒತ್ತಡ ರಹಿತವಾದ ಜೀವನವನ್ನು ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

Ad Widget . Ad Widget .

ಪ್ರಭಾರ ಪ್ರಾಂಶುಪಾಲರಾದ ದಿನೇಶ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷಾ ವಿಭಾಗದ ಪ್ರಾಧ್ಯಾಪಕ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ಪ್ರೊ.ಶ್ರಜನ್ ಮುಂಡೋಡಿ ಪ್ರಸ್ತಾವನೆಗೈದು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

Ad Widget . Ad Widget .

ಆಂಗ್ಲಭಾಷಾ ವಿಭಾಗದ ಪ್ರಾಧ್ಯಾಪಕಿ ಪ್ರೊ.ವನಿತಾ ಹಾಗೂ ರಾಜ್ಯ ಶಾಸ್ತ್ರ ಉಪನ್ಯಾಸಕಿ ಪ್ರೊ.ಸ್ವಾತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ಎಲ್ಲಾ ವಿದ್ಯಾರ್ಥಿಗಳು ಮತ್ತು ಆಂಗ್ಲ ಸಾಹಿತ್ಯ (ಐಚ್ಚಿಕ) ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅನ್ವಿತಾ ಪ್ರಾರ್ಥಿಸಿ, ಮಮತಾ.ಕೆ.ಪಿ. ಸ್ವಾಗತಿಸಿ, ಬಿಂದುಭಾರ್ಗವಿ ವಂದಿಸಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *