ತನ್ನ ಕೈಯಿಂದ ಹಣ ಹೋದರೂ ಬೇರೆಯೊಬ್ಬರ ಹಣಕ್ಕೆ ಆಸೆಪಟ್ಟವಳಲ್ಲ-ಚೈತ್ರಾ ಕುಂದಾಪುರ ತಾಯಿ

ಸಮಗ್ರ ನ್ಯೂಸ್: ಕೋಟಿಗಟ್ಟಲೆ ಹಣ ವಸೂಲಿ ಮಾಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ಚೈತ್ರಾ ಕುಂದಾಪುರ ಬಗ್ಗೆ ಅವರ ತಾಯಿ ರೋಹಿಣಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳನ್ನು ಬಳಸಿಕೊಂಡು ಅವಳನ್ನು ಈ ಸ್ಥಿತಿಗೆ ತರಲಾಗಿದೆ ಎಂದು ಹೇಳಿದ್ದಾರೆ.

Ad Widget ... ..

ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಗಳನ್ನ ಪೊಲೀಸರು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ಮಗಳನ್ನ ವಶಕ್ಕೆ ಪಡೆದ ಮಾಹಿತಿ ಜೊತೆಗೆ ಮಗಳೊಂದಿಗೆ ಫೋನ್​ನಲ್ಲೇ ಮಾತನಾಡಿಸಿದ್ದಾರೆ. ಮಗಳು ಧೈರ್ಯ ತೆಗೆದುಕೊಳ್ಳುವಂತೆ ಹೇಳಿದ್ದಾಳೆ.
ಇನ್ನು ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ. ನನ್ನ ಮಗಳನ್ನ ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತರಲಾಗಿದೆ. ತನ್ನ ಕೈಯಿಂದ ಹಣ ಹೋದರೂ ಪರವಾಗಿಲ್ಲ ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು. ಏನೂ ಮಾಡದಿರುವ ತಪ್ಪಿಗೆ ನನ್ನ ಮಗಳು ಗುರಿಯಾಗಿದ್ದಾಳೆ. ನಮಗೆ ಯಾವ ಚಿಂತೆಯೂ ಆಕೆ ಕೊಡಲ್ಲ ಅವಳೇ ಎಲ್ಲ ನಿಭಾಯಿಸುತ್ತಾಳೆ ಎಂದು ಚೈತ್ರಾ ಕುಂದಾಪುರ ತಾಯಿ ರೋಹಿಣಿ ಪ್ರತಿಕ್ರಿಯಿಸಿದ್ದಾರೆ.

Ad Widget

Leave a Comment

Your email address will not be published. Required fields are marked *