ಸಮಗ್ರ ನ್ಯೂಸ್: ಸಿಸಿಬಿ ಕಚೇರಿಗೆ ತೆರಳುತ್ತಿದ್ದಂತೆ ಚೈತ್ರ ಕುಂದಾಪುರ ಮಾಧ್ಯಮಗಳೊಂದಿಗೆ ಮಾತನಾಡುತ್ತ ಸ್ವಾಮೀಜಿ ಸಿಕ್ಕಿ ಹಾಕಿಕೊಳ್ಳಲಿ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ, ಇಂದಿರ ಕ್ಯಾಂಟಿನ್ ಬಿಲ್ ಬಾಕಿ ಇದೆ ಅದಕ್ಕಾಗಿ ಈ ಷಡ್ಯಂತರ ಎಂದು ಹೇಳಿದ್ದರು. ಈ ಬಗ್ಗೆ ಗೋವಿಂದ ಬಾಬು ಪ್ರತಿಕ್ರಿಯಿಸಿದು ಹೀಗೆ.
ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ ಯಾವುದೇ ಸಂಬಂಧ ಇಲ್ಲ. ನನ್ನ ಉದ್ಯಮದಲ್ಲಿ ಇಂದಿರಾ ಕ್ಯಾಂಟೀನ್ ಕೇವಲ 10%. ಉಳಿದ 90% ಖಾಸಗಿ ಉದ್ಯಮದ್ದಾಗಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ನಾವು ಎಂದಿಗೂ ಅವರೊಂದಿಗೆ ಮಾತಾಡಿರಲಿಲ್ಲ ಎಂದು ಪ್ರಕರಣದ ದೂರುದಾರರಾದ ಉದ್ಯಮಿ, ಚೆಫ್ ಟ್ಯಾಕ್ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿ ಹೇಳಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ವಿಚಾರ ಇಲ್ಲಿ ಬರಲ್ಲ. ಅವರು ಮೋಸ ಮಾಡಿರುವುದು ರಾಜಕೀಯ ವಿಚಾರವಾಗಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಗೆ ಬರಲಿ. ನನ್ನ ಬಳಿಯಿರೋ ಎಲ್ಲಾ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಅವರು ನಮಗೆ ಪ್ಲ್ಯಾನ್ ಮಾಡಿ ಮೋಸ ಮಾಡಿದ್ದಾರೆ. ಅವರು ಯಾವ ಪಕ್ಷದವರೇ ಆಗಿರಲಿ, ಇನ್ನೊಂದು ಬಾರಿ ಇಂತಹ ಮೋಸ ಆಗಬಾರದು. ಇಂತಹವರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ.
ಸಿಸಿಬಿಗೆ ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದೇನೆ. ಸಿಸಿ ಕ್ಯಾಮೆರಾ, ವೀಡಿಯೋ, ಆಡಿಯೋ ಎಲ್ಲಾ ನೀಡಿದ್ದೇನೆ. ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಅವುಗಳನ್ನೂ ನೀಡಲಿದ್ದೇನೆ. ನಾನು ಬೆಳಗ್ಗಿನಿಂದ ರಾತ್ರಿವರೆಗೂ ದುಡಿದ ಹಣ, ಲಾಭವನ್ನೆಲ್ಲಾ ಒಟ್ಟುಗೂಡಿಸಿ 10 ಕೋಟಿ ರೂ. ನೀಡಿದ್ದೇನೆ. ಹೀಗಾಗಿ ಈ ಪ್ರಕರಣದಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಹೇಳಿದರು.