ಸಮಗ್ರ ನ್ಯೂಸ್:ಸುಳ್ಯದ ಜಯನಗರ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗ ದೈವ, ಸ್ವಾಮಿ ಶ್ರೀ ಕೊರಗತನಿಯ ದೈವಸ್ಥಾನ ಮತ್ತು ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ 2 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ಸೆ. 10ರಂದು ನಡೆಯಿತು.
ಸಮಾಜ ಸೇವಕಿ ಮಹಾಲಕ್ಷ್ಮೀ ಕೊರಂಬಡ್ಕ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ದೀಪ ಬೆಳಗಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಕೇಶವ ಸಿ.ಎ, ಪ್ರಧಾನ ಕಾರ್ಯದರ್ಶಿ ಸುಂದರ ಕುದ್ಪಾಜೆ, ಉಪಾಧ್ಯಕ್ಷ ಸುರೇಶ್ ನಾರಜೆ, ಉಪಕಾರ್ಯದರ್ಶಿ ಶಶಿಧರ ಕುದ್ಪಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ, ದೈವಸ್ಥಾನದ ಪಾತ್ರಿ ಬಾಬು.ಕೆ.ಪಿ, ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಅಧ್ಯಕ್ಷ ಕೇಶವ.ಸಿ.ಎ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿ, ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು ದೈವಸ್ಥಾನದ ವಠಾರದಲ್ಲಿ ನೆರವೇರಿಸಲಾಯಿತು.
ಸಂಜೆ( ಸೆ.10)ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಯೋಧ ಲೋಕೇಶ್ ಇರಂತಮಜಲು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಆಡಳಿತ ಸಮಿತಿಯ ಅಧ್ಯಕ್ಷ ಕೇಶವ ಸಿ.ಎ ವಹಿಸಿ, ವೇದಿಕೆಯಲ್ಲಿ ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ, ಸಮಾಜ-ಸೇವಕ ಮಂಜುನಾಥ ಬಳ್ಳಾರಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಆಡಳಿತ ಸಮಿತಿಯ ಸಂಚಾಲಕ ಜಿ.ಜಗನ್ನಾಥ ಜಯನಗರ ಪ್ರಾಸ್ತಾವಿಕ ಮಾತಾನಾಡಿ ಸ್ವಾಗತಿಸಿ, ಜನಾರ್ಧನ ಜಯನಗರ ವಂದಿಸಿ, ಸವಿತಾ ಮುಂಡಾಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.