ಸಮಗ್ರ ನ್ಯೂಸ್: ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಹಿಂದಿ ವಿಭಾಗ ಹಾಗೂ IQAC ಯ ಸಹಯೋಗದೊಂದಿಗೆ ಸೆ. 14ರಂದು ಹಿಂದಿ ದಿವಸ್ ಆಚರಿಸಲಾಯಿತು.

ದೀಪಾ ಕಟೇರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಿಂದಿ ದಿವಸದ ಮಹತ್ವ ಹಾಗೂ ಆಚರಣೆಯ ಬಗ್ಗೆ ಮಾತನಾಡಿದರು. ವಿಧ್ಯಾರ್ಥಿಗಳಿಗೆ ಹಿಂದಿ ಭಾಷಣ ಸ್ಪರ್ಧೆ, ಹಿಂದಿ ರಸಪ್ರಶ್ನೆ, ಹಿಂದಿ ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ (ಪ್ರಭಾರ) ಡಾ.ದಿನೇಶ್ ಕೆ ಅವರು ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿದರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ IQAC ಸಂಚಾಲಕರಾದ ಪ್ರೊ. ಲತಾ ಬಿ.ಟಿ. ಹಾಗೂ ಹಿಂದಿ ಉಪನ್ಯಾಸಕಿ ಭಕ್ತಿಶ್ರೀ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.