ಸಮಗ್ರ ನ್ಯೂಸ್: ಸೆ. 13ರಂದು ಪುತ್ತೂರು ಘಟಕ ಕಛೇರಿಯನ್ನು ಪುತ್ತೂರು ಹಳೆಯ ಪೊಲೀಸ್ ಠಾಣೆಯ ಎದುರು ಭಾಗದಲ್ಲಿರುವ ಮಹಾಲಿಂಗೇಶ್ವರ ವೆಂಚರ್ಸ್ ಕಟ್ಟಡಕ್ಕೆ (ಹಳೆಯ ಬೋನಂತಾಯ ಆಸ್ಪತ್ರೆ) ಸ್ಥಳಾಂತರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸುರೇಶ್ ಬಲ್ನಾಡು ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಗೃಹರಕ್ಷಕರು ಒಳ್ಳೆಯ ರೀತಿಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಅವರಿಗೆ ಜನರು ಹೆಚ್ಚಿನ ಸಹಕಾರವನ್ನು ಕೊಡಬೇಕು ಹಾಗೂ ಪ್ರೋತ್ಸಾಹ ಕೊಡಬೇಕು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರು ಬಹಳ ಅಗತ್ಯ ಅವರ ಸಮಸ್ಯೆಗಳಿಗೆ ಸರಕಾರ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ವೆಂಚರ್ಸ್ ಇದರ ಮ್ಯಾನೇಜರ್ ಬಾಲಕೃಷ್ಣ ಭಟ್ ಇವರು ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ೫೦ ವರುಷಗಳ ಇತಿಹಾಸವಿರುವ ಪುತ್ತೂರು ಘಟಕಕ್ಕೆ ಸರಕಾರ 10 ಸೆಂಟ್ಸ್ ಜಾಗ ಮಂಜೂರು ಮಾಡಿದೆ. ಶೀಘ್ರದಲ್ಲೇ ಸ್ವಂತ ಕಟ್ಟಡ ಆರಂಭ ಆಗಲಿದೆ ಎಂದು ನುಡಿದರು.
ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಹಿರಿಯ ಗೃಹರಕ್ಷಕ ಜಗನ್ನಾಥ್, ಸುದರ್ಶನ್ ಜೈನ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.