Ad Widget .

ಪ್ರೈವೇಟ್ ರೂಂನಲ್ಲಿ ಸೆಕ್ಸ್ ಫಿಲಂ‌ ನೋಡ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ಅಶ್ಲೀಲ ವಿಡಿಯೋಗಳನ್ನು ಇತರರಿಗೆ ತೋರಿಸದೆ ಖಾಸಗಿಯಾಗಿ ನೋಡುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಮತ್ತು ಅದು ವೈಯಕ್ತಿಕ ಇಚ್ಛೆ. ಇದನ್ನು ಅಪರಾಧವೆಂದು ಪರಿಗಣಿಸಿದರೆ, ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸಲಾಗುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಶ್ಲೀಲ ವಿಡಿಯೋ ವಿಡಿಯೋ ನೋಡುವುದು ಅಪರಾಧವಲ್ಲ. ಎಂದು ಹೈಕೋರ್ಟ್ ಹೇಳಿದೆ. ಇದರ ನಂತರ, ಹೈಕೋರ್ಟ್ 33 ವರ್ಷದ ಯುವಕನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತು. 2016 ರಲ್ಲಿ ಕೇರಳ ಪೊಲೀಸರು ರಸ್ತೆಬದಿಯ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೊವನ್ನು ವೀಕ್ಷಿಸುತ್ತಿದ್ದ ಯುವಕನನ್ನು ಹಿಡಿದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 292 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

Ad Widget . Ad Widget . Ad Widget .

ಇದೇ ಪ್ರಕರಣದಲ್ಲಿ ಎಫ್‌ಐಆರ್ ಜೊತೆಗೆ ನಡೆಯುತ್ತಿರುವ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ.

ಯಾವುದೇ ನ್ಯಾಯಾಲಯವು ಖಾಸಗಿಯಾಗಿ ಸೆಕ್ಸ್ ಪಿಲಂ ನೋಡುವುದನ್ನು ಅಪರಾಧವೆಂದು ಘೋಷಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಅವರ ವೈಯಕ್ತಿಕ ಆಯ್ಕೆಯಾಗಿತ್ತು. ಇದಲ್ಲದೆ, ಅಂತಹ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಅವರ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಆರೋಪಿಗಳು ತೋರಿಸಿದಂತೆ ಯಾವುದೇ ಆರೋಪಗಳಿಲ್ಲ ಎಂದು ನ್ಯಾಯಪೀಠ ಗಮನಿಸಿದೆ.

ಆದಾಗ್ಯೂ, ಆರೋಪಿಯು ಐಪಿಸಿಯ ಸೆಕ್ಷನ್ 292 ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಮಾಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಣೆಗಳನ್ನು ರದ್ದುಗೊಳಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.

Leave a Comment

Your email address will not be published. Required fields are marked *