Ad Widget .

ಚೈತ್ರಾ ಕುಂದಾಪುರ ಅಡಗಿ ಕುಳಿತದ್ದು ಮುಸ್ಲಿಂ ಫ್ರೆಂಡ್‌ ಮನೆಯಲ್ಲಿ ಅಂದರೆ ನಂಬ್ತೀರಾ?

ಸಮಗ್ರ ನ್ಯೂಸ್:‌ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ ತನ್ನನ್ನು ಹುಡುಕುತ್ತಿರುವ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಅಡಗಿ ಕುಳಿತದ್ದು ಒಬ್ಬ ಮುಸ್ಲಿಂ ಫ್ರೆಂಡ್‌ ಮನೆಯಲ್ಲಿ ಅಂದರೆ ನಂಬ್ತೀರಾ?

Ad Widget . Ad Widget .

ಸದಾ ಮುಸ್ಲಿಮರ ಮೇಲೆ ದ್ವೇಷ ಭಾಷಣ ಮಾಡುವ ಚೈತ್ರಾ ಅಂತಿಮ ಕ್ಷಣದಲ್ಲಿ ಆಶ್ರಯ ಪಡೆದಿದ್ದು ಮುಸ್ಲಿಮರ ಮನೆಯಲ್ಲಿ ಎನ್ನುವುದು ವಿಧಿ ವಿಪರ್ಯಾಸವೇ ಇರಬಹುದು! ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ಗೋವಿಂದ ಪೂಜಾರಿ ಅವರು ದೂರು ಕೊಟ್ಟ ಬಳಿಕ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರಳಿಗಾಗಿ ಹುಡುಕಾಟ ಶುರು ಮಾಡಿದ್ದರು. ಆದರೆ ಆಕೆ ತಪ್ಪಿಸಿಕೊಳ್ಳುತ್ತಲೇ ಇದ್ದಳು. ಕೊನೆಗೂ ಮಂಗಳವಾರ ರಾತ್ರಿ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಆಕೆಯನ್ನು ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದಾರೆ.

Ad Widget . Ad Widget .

ಕಾಂಗ್ರೆಸ್‌ ವಕ್ತಾರೆ ಅಂಜುಮ್‌ ಮನೆಯಲ್ಲಿ ಆಶ್ರಯ!
ಅಂದ ಹಾಗೆ ಆಕೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿ ಕುಳಿತದ್ದು ಉಡುಪಿಯ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಮನೆಯಲ್ಲಿ. ಅವರಿಬ್ಬರೂ ಹಿಂದಿನಿಂದಲೂ ಗೆಳೆಯರಾಗಿದ್ದು, ತಾನು ಅಪಾಯದಲ್ಲಿರುವುದಾಗಿ ಹೇಳಿ ಅಂಜುಮ್‌ ಮನೆಯಲ್ಲಿದ್ದಳು. ಉಡುಪಿಯ ಅಪಾರ್ಟ್ಮೆಂಟ್ ನಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಕುಳಿತಿದ್ದ ಚೈತ್ರಾ ಕುಂದಾಪುರಗಳನ್ನು ಬಂಧಿಸಿದ ಬಳಿಕ ಸಿಸಿಸಿ ಈಗ ಕಾಂಗ್ರೆಸ್ ಮಹಿಳಾ ನಾಯಕಿ ಅಂಜುಂಗೆ ನೋಟೀಸ್ ನೀಡಿದೆ. ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

Leave a Comment

Your email address will not be published. Required fields are marked *