Ad Widget .

Food Recipe|ಎಳ್ಳು ಚಿಕ್ಕಿ (ಕಟ್ಲಿಸ್) ದೇಹಕ್ಕೆ ಎಷ್ಟು ಒಳ್ಳೆಯದು?| ಹೇಗೆ ಮಾಡೋದು? ಸಂಪೂರ್ಣ ಮಾಹಿತಿ ಇಲ್ಲಿದೆ

ಸಮಗ್ರ ನ್ಯೂಸ್: ಎಳ್ಳು ಮತ್ತು ಬೆಲ್ಲ ಇವೆರಡನ್ನೂ ಜೊತೆಯಾಗಿ ತಿನ್ನುವುದರಿಂದ ಕೂದಲು ಹಾಗೂ ಚರ್ಮದ ಬೆಳವಣಿಗೆ ಹೆಚ್ಚುತ್ತದೆ. ಇದು ವಿವಿಧ ಪೋಷಕಾಂಶಗಳು ಮತ್ತು ಫೈಬರ್‌ನಿಂದ ತುಂಬಿರುತ್ತದೆ. ಎಳ್ಳನ್ನು ಹುರಿದ, ಪುಡಿಮಾಡಿ ಅಥವಾ ಸಲಾಡ್‌ಗಳ ಮೇಲೆ ಚಿಮುಕಿಸಿ ಸೇವಿಸಬಹುದು.ಇದು ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಅನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇವತ್ತು ಎಳ್ಳು ಚಿಕ್ಕಿ ಹೇಗೆ ಮಾಡೋದು ಅಂತ ನೋಡೋಣ.

Ad Widget . Ad Widget .

ಬೇಕಾಗುವ ಪದಾರ್ಥಗಳು:- ಬಿಳಿ ಎಳ್ಳು – 1 ಬಟ್ಟಲು,
ಪುಡಿ ಮಾಡಿದ ಬೆಲ್ಲ – 1 ಬಟ್ಟಲು, ನೀರು- ಸ್ವಲ್ಪ, ತುಪ್ಪ – ಸ್ವಲ್ಪ,
ಏಲಕ್ಕಿ ಪುಡಿ – ಕಾಲು ಚಮಚ, ಅಡುಗೆ ಸೋಡಾ – ಕಾಲು ಚಮಚ,

Ad Widget . Ad Widget .

ಮಾಡುವ ವಿಧಾನ:- ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಪಕ್ಕಕ್ಕಿಡಿ. ಬಳಿಕ ಅದೇ ಪ್ಯಾನ್‌ಗೆ ಬೆಲ್ಲ ಹಾಕಿ, 2 ಚಮಚ ನೀರನ್ನು ಸೇರಿಸಿಕೊಳ್ಳಿ. ಮೀಡಿಯಮ್ ಉರಿಯಲ್ಲಿ ಬೆಲ್ಲವನ್ನು ಕರಗಿಸಿಕೊಳ್ಳಿ.ಕರಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ. ನಂತರ ಆ ಮಿಶ್ರಣಕ್ಕೆ ಕಾಲು ಚಮಚ ಅಡುಗೆ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿ, ಬಳಿಕ ಎಳ್ಳನ್ನು ಸೇರಿಸಿಕೊಳ್ಳಿ.
ಸಣ್ಣ ಉರಿಯಲ್ಲಿ 2 ರಿಂದ 3 ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು. ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ ಬೆಲ್ಲ ಮತ್ತು ಎಳ್ಳಿನ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ.ನಂತರ ಸಮತಟ್ಟಾಗಿ ಪ್ಲೇಟ್‌ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಇದೀಗ ಎಳ್ಳು ಚಿಕ್ಕಿ ಸವಿಯಲು ಸಿದ್ಧ.

Leave a Comment

Your email address will not be published. Required fields are marked *