Ad Widget .

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಪೋಷಕರಿಂದ ಶಿಕ್ಷಕರ ದಿನಾಚರಣೆ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಪೋಷಕರಿಂದ ಸೆ. 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

Ad Widget . Ad Widget .

ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಶಿಕ್ಷಕ ಬಿ.ಪುಂಗವ ಗೌಡ ಸುಬ್ರಹ್ಮಣ್ಯ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ. ಗಂಗಮ್ಮ ಅರಂತೋಡು ಅವರು ಭಾಗವಹಿಸಿ ಶಿಕ್ಷಕ್ಷರ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಇವರಿಗೆ ಸಂಸ್ಥೆಯ ಪರವಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.

Ad Widget . Ad Widget .

ಶಾಲಾ ಪೋಷಕರು ಒಡಗೂಡಿ ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ ಹಾಗೂ ಶಾಲಾ ಶಿಕ್ಷಕಿ ನಿರ್ಮಲ ಹಾಗೂ ಸಂಸ್ಥೆಯ ಸಹಾಯಕಿ ಶ್ವೇತ ಅವರನ್ನು ಮಕ್ಕಳ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ. ವಹಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ  ಪೋಷಕರಾದ ಪ್ರಮೀಳ ಪ್ರಾರ್ಥಿಸಿ, ಶುಶಾನ್ ಸ್ವಾಗತಿಸಿ, ರಕ್ಷಿತಾ ವಂದಿಸಿ, ಶಿಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *