Ad Widget .

ಸುಳ್ಯ: ಹಾಡುಹಗಲೇ ಮನೆ ದರೋಡೆ| ಚಿನ್ನಾಭರಣ, ನಗದು ಹೊತ್ತೊಯ್ದ ಕಳ್ಳರ‌ ಗ್ಯಾಂಗ್

ಸಮಗ್ರ ನ್ಯೂಸ್: ಹಾಡುಹಗಲೇ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಸೆ.12ರ ಮಧ್ಯಾಹ್ನ ವರದಿಯಾಗಿದೆ.

Ad Widget . Ad Widget .

ಕದಿಕಡ್ಕದ ವಸಂತ ರೈ ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದು, ವಸಂತ ಅವರ ಪತ್ನಿ ಹಾಗೂ ಮಕ್ಕಳು ಕೆಲಸದ ನಿಮಿತ್ತ ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ತೆರಳಿದ್ದರು. ಮಧ್ಯಾಹ್ನ 12.30ರ ವೇಳೆಗೆ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಮನೆಯ ಹಿಂಬದಿಯಿಂದ ಬಾಗಿಲು ಮುರಿದಿರುವುದು ಬೆಳಕಿಗೆ ಬಂದಿದೆ.

Ad Widget . Ad Widget .

ಮನೆಯ ಒಳಗಿದ್ದ ಎರಡು ಕಪಾಟಿನ ಲಾಕ್ ಮುರಿದಿದ್ದು, ಅದರಲ್ಲಿದ್ದ ರೈ ಪತ್ನಿಯ ಕರಿಮಣಿ, ಚಿನ್ನದ ಸರ ಹಾಗೂ ಎರಡು ಉಂಗುರ ಹಾಗೂ ಹದಿಮೂರು ಸಾವಿರ ರೂ. ನಗದು ದೋಚಿ ಪರಾರಿಯಾಗಿರುವುದು ತಿಳಿದುಬಂದಿದೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *