Ad Widget .

ಕಡಾಯಿ ಪನ್ನೀರ್ ಮಸಾಲ

ಸಮಗ್ರ ನ್ಯೂಸ್: ಕಡಾಯಿ ಪನ್ನೀರ್ ಮಸಾಲ ಇದನ್ನ ಮನೇಲೇ ರುಚಿ ರುಚಿಯಾಗಿ ಮಾಡ್ಬೋದು. ಇದನ್ನ ಬೆಳ್ಳಿಗಿನ ತಿಂಡಿ ಚಪಾತಿ ಪರೋಟ ಜೊತೆ ತಿಂದ್ರೆ ಸೂಪರ್ ಆಗಿರುತ್ತದೆ. ಇನ್ನುನು ಇದನ್ನ ಹೇಗೆ ಮಾಡೋದು ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ.

Ad Widget . Ad Widget .

ಬೇಕಾಗುವ ಪದಾರ್ಥಗಳು:-

Ad Widget . Ad Widget .

ಪನ್ನೀರ್ ತುಂಡುಗಳು-200 ಗ್ರಾಂ, ಟೊಮೆಟೊ ಪ್ಯೂರಿ – 1 ಬಟ್ಟಲು ,ಕ್ಯಾಪ್ಸಿಕಂ – 1 (ಚಿಕ್ಕದ್ದಾಗಿ ಕತ್ತರಿಸಿದ್ದು), ಈರುಳ್ಳಿ – 1 , ಕ್ರೀಂ – 1 ಟೇಬಲ್ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ಶುಂಠಿ, ಬೆಳ್ಳುಳ್ಳಿ ಪೇಸ್ಟ್– 1/2 ಚಮಚ, ಕಾಳು ಮೆಣಸು– 1 ಚಮಚ, ದನಿಯಾ– 1 ಚಮಚ, ಚಕ್ಕೆ – 1 ಸಣ್ಣ ತುಂಡು, ಲವಂಗ – 2, ಅರಶಿನ – 1/4 ಚಮಚ, ಗರಂ ಮಸಾಲ – 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಬೆಣ್ಣೆ – ಸ್ವಲ್ಪ.

ಮಾಡುವ ವಿಧಾನ…
ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಮೆಣಸು, ದನಿಯಾ, ಜೀರಿಗೆ, ಚಕ್ಕೆ, ಲವಂಗ ಹಾಕಿ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಒಂದು 1 ಚಮಚ ಬೆಣ್ಣೆ ಹಾಕಿ ಅದಕ್ಕೆ ಪನ್ನೀರ್, ಕ್ಯಾಪ್ಸಿಕಂ ಹಾಕಿ ಹುರಿದುಕೊಳ್ಳಿ. ಇದನ್ನು ಒಂದು ತಟ್ಟೆಗೆ ಹಾಕಿ ತೆಗೆದಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಗೆ ಬೆಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಕೆಂಪಗಾದ ನಂತರ ಅದಕ್ಕೆ ಟೊಮೆಟೊ ಪ್ಯೂರಿ ಹಾಕಿಕೊಳ್ಳಿ. 2 ನಿಮಿಷ ಇದು ಚೆನ್ನಾಗಿ ಬೇಯಲಿ.
ನಂತರ ಅರಿಶಿನ, ರುಬ್ಬಿಟ್ಟುಕೊಂಡ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ 2 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಉಪ್ಪು, ಗರಂ ಮಸಾಲ, ಹುರಿದ ಕ್ಯಾಪ್ಸಿಕಂ, ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಕ್ರೀಮ್ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಿ ಕೊಳ್ಳಿ. ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಸವಿಯಲು ಸಿದ್ಧ.

Leave a Comment

Your email address will not be published. Required fields are marked *