Ad Widget .

ಏಷ್ಯಾ ಕಪ್ ಕ್ರಿಕೆಟ್| ಇಂದು ಭಾರತ – ಶ್ರೀಲಂಕಾ ನಡುವೆ ಪಂದ್ಯ

ಸಮಗ್ರ ನ್ಯೂಸ್: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾದ ನಡುವೆ ಪಂದ್ಯಾಟ ಶ್ರೀಲಂಕಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

Ad Widget . Ad Widget .

ಭಾರತ ತಂಡವು ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿ, ಭರ್ಜರಿ ಜಯ ಗಳಿಸಿದ್ದು ಇಂದು‌ ಕೂಡ ಅದೇ ಪ್ರದರ್ಶನವನ್ನು ತೋರಿಸುವ ಹುಮ್ಮಸ್ಸಿನಲ್ಲಿ ಇದೆ. ರೋಹಿತ್, ಗಿಲ್, ಕೊಹ್ಲಿ, ರಾಹುಲ್ ಒಳಗೊಂಡ ಅತ್ಯುತ್ತಮ ಬ್ಯಾಟಿಂಗ್ ವಿಭಾಗವನ್ನು ಭಾರತ ಹೊಂದಿದ್ದು, ಗೆಲುವನ್ನು ಸಾಧಿಸುವ ಕನಸು ಕಾಣುತ್ತಿದೆ.

Ad Widget . Ad Widget .

ಅದೇ ರೀತಿ ಶ್ರೀಲಂಕಾ ಕೂಡ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವನ್ನು ಸಾಧಿಸಿದ್ದು, ಮತ್ತೆ ಅದೇ ಪ್ರದರ್ಶನವನ್ನು ತೋರ್ಪಡಿಸುವ ನಂಬಿಕೆಯನ್ನು ಹೊಂದಿದೆ. ಬಾಂಗ್ಲಾ ವಿರುದ್ಧ ಆರಂಭಿಕ ವೈಫಲ್ಯವನ್ನು ಕಂಡರೂ, ನಂತರ ಮೇಲುಗೈ ಸಾಧಿಸುವಲ್ಲಿ ಲಂಕಾ ಯಶಸ್ಸು ಸಾಧಿಸಿತ್ತು.
ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದು, ಗೆಲುವನ್ನು ಪಡೆದ ತಂಡವು ಫೈನಲ್ ತಲುಪುವುದು ಖಚಿತ ಎನ್ನಲಾಗಿದೆ.

Leave a Comment

Your email address will not be published. Required fields are marked *