Ad Widget .

ಡೇನಿಯಲ್ ಚಂಡಮಾರುತ ಅಬ್ಬರ| ಲಿಬಿಯಾದಲ್ಲಿ 2000 ಕ್ಕೂ ಹೆಚ್ಚು ಮಂದಿ ಸಾವು; ಹಲವರು ಕಣ್ಮರೆ

ಸಮಗ್ರ ನ್ಯೂಸ್: ಉತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾ ಸರ್ಕಾರದ ಪ್ರಧಾನಿ ಒಸಾಮಾ ಹಮದ್‌ ಸೋಮವಾರ ಹೇಳಿದ್ದಾರೆ.

Ad Widget . Ad Widget .

‘ಅಲ್‌ ಮಸರ್‌ ಟೆಲಿವಿಷನ್‌’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಒಸಾಮಾ ಹಮದ್‌ ಅವರು, ಮೆಡಿಟರೇನಿಯನ್‌ನಿಂದ ಡೇನಿಯಲ್‌ ಚಂಡಮಾರುತ ದೇಶಕ್ಕೆ ಅಪ್ಪಳಿಸಿದ ನಂತರ ವಿಪತ್ತು ವಲಯವೆಂದು ಘೋಷಿಸಲಾದ ಡರ್ನಾದಲ್ಲಿ ಪ್ರವಾಹವು ನೆರೆಹೊರೆಯ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಿದೆ. ಡರ್ನಾ ವಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

Ad Widget . Ad Widget .

ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶನಿವಾರವೇ ಶಾಲಾ, ಕಾಲೇಜು ತರಗತಿಗಳಿಗೆ ರಜೆ ನೀಡಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯು ತುರ್ತು ಪರಿ‌ಸ್ಥಿತಿ ಘೋಷಣೆ ಮಾಡಿದ್ದರು.

Leave a Comment

Your email address will not be published. Required fields are marked *