Ad Widget .

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ| ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ

ಸಮಗ್ರ ನ್ಯೂಸ್: ಬಿಸ್ಕೆಟ್ ಪ್ಯಾಕ್‌ನಲ್ಲಿ ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ ಇದ್ದದ್ದಕ್ಕೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಗ್ರಾಹಕನಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

Ad Widget . Ad Widget .

ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೆಟೊಂದನ್ನು ಖರೀದಿಸಿದ್ದರು. ಬಿಸ್ಕೆಟ್ ಪ್ಯಾಕ್ ನ ಜಾಹೀರಾತಿನ ಮೇಲೆ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು. ಆದರೆ ಅದರಲ್ಲಿ 15 ಬಿಸ್ಕೆಟ್‌ ಮಾತ್ರ ಇತ್ತು. ಆದ್ದರಿಂದ
ಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಸ್ಪಷ್ಟನೆ ಕೇಳಲು ದಿಲ್ಲಿಬಾಬು ಅವರು ಸ್ಥಳೀಯ ಅಂಗಡಿಯಲ್ಲಿಯೂ ಕವರ್ ಮೇಲೆ ಇರುವಂತೆ ಒಳಗೆ 16 ಬಿಸ್ಕೆಟ್ ಏಕಿಲ್ಲ, ಒಂದು ಬಿಸ್ಕೆಟ್ ಏಕೆ ಕಡಿಮೆ ಇದೆ ಎಂದು ಕೇಳಿದ್ದಾರೆ, ಐಟಿಸಿ ಸ್ಟೋರ್‌ನಲ್ಲೂ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

Ad Widget . Ad Widget .

ಆದರೆ ಅವರಿಗೆ ಈ ಬಗ್ಗೆ ಎಲ್ಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಇದರಿಂದ ಸಿಟ್ಟಿಗೆದ್ದ ದಿಲ್ಲಿಬಾಬು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಐಟಿಸಿ ಪ್ರತಿದಿನವೂ 50 ಲಕ್ಷ ಪ್ಯಾಕೇಟ್ ಬಿಸ್ಕೆಟ್‌ಗಳನ್ನು ಉತ್ಪಾದನೆ ಮಾಡುತ್ತದೆ. ಒಂದು ಬಿಸ್ಕೆಟ್‌ಗೆ 75 ಪೈಸೆ ವೆಚ್ಚವಿದೆ. ಆದರೆ ಪ್ಯಾಕೇಟ್‌ನಲ್ಲಿ 16 ಬಿಸ್ಕೆಟ್ ಇದೆ ಎಂದು 15 ಬಿಸ್ಕೆಟ್ ಮಾತ್ರ ಪ್ಯಾಕ್ ಮಾಡುವ ಮೂಲಕ ಸಂಸ್ಥೆ ಗ್ರಾಹಕರಿಗೆ ಪ್ರತಿನಿತ್ಯ 29 ಲಕ್ಷ ರೂ.ಗಳನ್ನು ಉದ್ದೇಶಪೂರ್ವಕವಾಗಿ ವಂಚಿಸುತ್ತಿದೆ ಎಂದು ಹೇಳಿದ್ದರು.

ಈ ವೇಳೆ ಕೋರ್ಟ್‌ಗೆ ಹಾಜರಾದ ಐಟಿಸಿ ಕಂಪನಿಯ ವಕೀಲರು ಬಿಸ್ಕೆಟ್‌ಗಳ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಎಷ್ಟು ತೂಕವಿದೆ ಎಂಬುದರ ಮೇಲೆ ಮಾರಾಟ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ. ಪ್ರತಿ ಸನ್‌ಫೀಸ್ಟ್ ಮಾರಿ ಲೈಟ್ ಪ್ಯಾಕೆಟ್ 76 ಗ್ರಾಂಗಳ ನಿವ್ವಳ ತೂಕ ಸೂಚಿಸುತ್ತದೆ ಎಂದು ಹೇಳಿದ್ದಾರೆ. ಆದರೆ, ನ್ಯಾಯಾಲಯದ ತನಿಖೆ ವೇಳೆ 15 ಬಿಸ್ಕತ್ತುಗಳಿರುವ ಪ್ಯಾಕೆಟ್‌ಗಳು ಕೇವಲ 74 ಗ್ರಾಂ ತೂಕ ಹೊಂದಿದ್ದವು. ಪ್ಯಾಕೆಟ್‌ನಲ್ಲಿ ಸ್ಪಷ್ಟವಾಗಿ 16 ಬಿಸ್ಕೆಟ್‌ಗಳು ಇರುವ ಬಗ್ಗೆ ಸಂಸ್ಥೆಯು ನಮೂದಿಸಿದೆ. ಹೀಗಿದ್ದೂ, ಪ್ಯಾಕೆಟ್ ಒಳಗೆ ಒಂದು ಬಿಸ್ಕೆಟ್ ಕಡಿಮೆ ಮಾಡಿರುವುದು ತಪ್ಪು ಎಂದಿರುವ ನ್ಯಾಯಾಲಯ, ಈ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಐಟಿಸಿ ಸಂಸ್ಥೆಗೆ ಸೂಚಿಸಿದೆ.

Leave a Comment

Your email address will not be published. Required fields are marked *