ಸಮಗ್ರ ನ್ಯೂಸ್: ಭಾಸ್ಕರ್ ನಾಯ್ಕ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಟ್ರಾಸಿಟಿ ಕೇಸ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರನ್ನು ಯಾಕೆ ಬಂಧಿಸಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಬಾಸ್ಕರ್ ನಾಯ್ಕ್ ಸಪ್ಟೆಂಬರ್ ೩ ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಸಂದರ್ಶನ ನೀಡಿ ವಾಪಸ್ ಬರುವಾಗ ಮಹೇಶ್ ಶೆಟ್ಟಿ ತಿಮರೋಡಿ ,ಮೋಹನ್ ಶೆಟ್ಟಿ , ಮುಖೇಶ್ ಶೆಟ್ಟಿ, ನಿತೀನ್, ನೀತು, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ನಡೆದು ಒಂಬತ್ತು ದಿನ ಕಳೆದರೂ ಈ ವರೆಗೆ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿರಲಿಲ್ಲ. ಅಲ್ಲದೆ ಬೆಳ್ತಂಗಡಿ ಮತ್ತು ಕಟೀಲಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸಿದ್ದರು. ಈ ಬಗ್ಗೆ ಬಾಸ್ಕರ್ ನಾಯ್ಕ್ ಹೈಕೋರ್ಟ್ ಗೆ ಸೋಮವಾರ ಮೊರೆ ಹೋಗಿದ್ದರು. ಇಂದು ಅರ್ಜಿಯನ್ನು ಪರಿಶೀಲನೆ ನಡೆಸಿದ ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಶೀಘ್ರವಾಗಿ ಆರೋಪಿ ತಿಮರೋಡಿ ಮತ್ತು ತಂಡವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶ ಹೊರಡಿಸಿದೆ ಎನ್ನಲಾಗಿದೆ. ಖ್ಯಾತ ಹೈಕರ‍್ಟ್ ವಕೀಲಕರಾದ ರಾಜ್ ಶೇಖರ್ ಹಲ್ಲೆಗೊಳಾಗದ ಬಾಸ್ಕರ್ ನಾಯ್ಕ್ ಪರವಾಗಿ ವಾದಿಸಿದರು.