Ad Widget .

ಸುಳ್ಯ: ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

ಸಮಗ್ರ ನ್ಯೂಸ್: ಬಿಜೆಪಿ ರೈತ ಮೋರ್ಚಾ ಕರ್ನಾಟಕ, ಸುಳ್ಯ ಬಿಜೆಪಿ ಮಂಡಲದ ವತಿಯಿಂದ ರಾಜ್ಯ ಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸರಕಾರದ ನಡೆ ಖಂಡಿಸಿ ಸುಳ್ಯ ತಾಲೂಕು ಕಛೇರಿ ಬಳಿ ಸೋಮವಾರ ಪ್ರತಿಭಟನಾ ಸಭೆ ನಡೆಯಿತು.

Ad Widget . Ad Widget .

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸರಕಾರದ ಜನ-ವಿರೋಧಿ ನೀತಿಯಿಂದ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದಿದೆ. ಸರಕಾರ ರೈತ ಪರ ಎಂದು ಪ್ರಚಾರ ಮಾಡಿ ಇಂದು ರೈತ ವಿರೋಧಿ ನೀತಿ ಅನುಸರಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದೆ. ರೈತರ ಜೀವನ ಸುಗಮವಾಗಲು ಹೋರಾಟ ಅಗತ್ಯವಾಗಿದೆ. ಬಿಜೆಪಿ ಮುಂದೆಯೂ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.

Ad Widget . Ad Widget .

ರಾಕೇಶ್ ರೈ ಕೆಡೆಂಜಿ ಮಾತನಾಡಿ, ಕಾಂಗ್ರೆಸ್ ಸರಕಾರ ಗ್ಯಾರಂಟಿ ಜಾರಿಗೊಳಿಸುವ ನೆಪದಲ್ಲಿ ಕೇವಲ 110 ದಿನದಲ್ಲಿ ಕೈ ಕಾಲು ಹೊಡೆದುಕೊಳ್ಳುವ ಪರಿಸ್ಥಿತಿಯಲ್ಲಿದೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗದ ಸ್ಥಿತಿ ಸರಕಾರಕ್ಕೆ ಬಂದಿದೆ. ಬರ ಘೋಷಣೆಗೆ ಸರಕಾರ ಹಿಂದೇಟು ಹಾಕುತ್ತಿದೆ. ಸಿದ್ದರಾಮಯ್ಯ ಅಹಂಕಾರ ಪ್ರವೃತ್ತಿಯಿಂದ ಜನರ ನೋವು ಆಲಿಸುತ್ತಿಲ್ಲ ಎಂದ ಅವರು ಗ್ಯಾರಂಟಿ ನೆಪದಲ್ಲಿ ಸರಕಾರ ಲೂಟಿ ಮಾಡಲು ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.

ಹರೀಶ್ ಕಂಜಿಪಿಲಿ ಮಾತನಾಡಿದರು. ಪ್ರಮುಖರಾದ ಪುಲಸ್ತ್ಯಾ ರೈ ಕಡಬ, ಪುಷ್ಪಾವತಿ ಬಾಳಿಲ, ವೆಂಕಟ್ ದಂಬೆಕೋಡಿ, ಜಾನವಿ ಕಾಂಚೋಡು, ಸುಭೋದ ರೈ, ಚನಿಯ ಕಲ್ತಡ್ಕ, ವಿನಯ ಕುಮಾರ್ ಕಂದಡ್ಕ, ಮಹೇಶ್ ರೈ ಮೇನಾಲ, ಸಂತೋಷ್ ಕುತ್ತಮೊಟ್ಟೆ, ಎಸ್.ಎನ್.ಮನ್ಮಥ, ಸುಭೋದ್ ರೈ ಮೇನಾಲ, ಸುನಿಲ್ ಕೇರ್ಪಳ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಸರಕಾರದ ವಿರುದ್ಧ ದಿಕ್ಕಾರ ಕೂಗಲಾಯಿತು. ರಮೇಶ್ ಕಲ್ಪುರೆ ಸ್ವಾಗತಿಸಿದರು. ಮಹೇಶ್ ಮೇನಾಲ ವಂದಿಸಿದರು. ಬಳಿಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Leave a Comment

Your email address will not be published. Required fields are marked *