ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಮರು ತನಿಖೆಗೆ ಅಫೀಲು ರೆಡಿ!?

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕ ಬಳಿ ಕೊಲೆಯಾದ ಕು.ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಲಭ್ಯವಾಗಿದೆ.

Ad Widget ... ..

ಜು.17ರಂದು ಆರೋಪಿ ಸಂತೋಷ್ ರಾವ್ ನನ್ನು ದೋಷಮುಕ್ತಗೊಳಿಸಿ ಸಿಬಿಐ ಕೋರ್ಟ್ ಕೇಸು ಖುಲಾಸೆಗೊಳಿಸಿದ ಬಳಿಕ ಇದೀಗ ಸೌಜನ್ಯಳಿಗೆ ನ್ಯಾಯಕ್ಕಾಗಿ ಮತ್ತೆ ನ್ಯಾಯಾಲಯದ ಕದ ತಟ್ಟಲಾಗುತ್ತಿದೆ. ಈ ಕುರಿತಂತೆ ಸೌಜನ್ಯ ಕುಟುಂಬಸ್ಥರು ಹೈಕೋರ್ಟ್ ಗೆ ಮರು ತನಿಖೆಗೆಗಾಗಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Ad Widget

ಸದ್ಯ ಎಲ್ಲಾ ವಿಚಾರಗಳು ಕಾನೂನು ಚೌಕಟ್ಟಿನೊಳಗೆ ನಡೆಯುತ್ತಿದ್ದು, ಈ ನಡುವೆ ಸೌಜನ್ಯಳ ನ್ಯಾಯಕ್ಕಾಗಿ ರಾಜ್ಯಾದ್ಯಂತ ಹೋರಾಟಗಳು ತೀವ್ರಗೊಳ್ಳುತ್ತಿವೆ. ಈ ನಡುವೆ ಹೈಕೋರ್ಟ್ ಬೀದಿಯಲ್ಲಿನ ಹೋರಾಟಗಳಿಂದ ಏನೂ ಸಾಧ್ಯವಾಗದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ‌ನ್ನು ವಜಾಗೊಳಿಸಿದ್ದು, ಇದೀಗ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.

Leave a Comment

Your email address will not be published. Required fields are marked *