ಲೆಫ್ಟಿನೆಂಟ್ ಪದವಿಗೇರಿದ ಮುರುವಂಡ ತನುಷ್ ಅಪ್ಪಯ್ಯ

ಸಮಗ್ರ ನ್ಯೂಸ್: ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಅವರು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಭಾರತೀಯ ಸೇನೆಯಲ್ಲಿ ಸೆ .11 ರಂದು ತೇರ್ಗಡೆಯಾಗಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ.

Ad Widget ... ..

ತನುಷ್ ಅಪ್ಪಯ್ಯ ಅವರು ಕೊಳತೋಡು ಬೈಗೋಡು ಗ್ರಾಮದವರಾಗಿದ್ದು, ಭವಿಷ್ಯದಲ್ಲಿ ಭಾರತೀಯ ಸೇನೆಯ ಉನ್ನತಾಧಿಕಾರಿಯಾಗಿ ಪದೋನ್ನತಿ ಪಡೆಯಲಿರುವ ಕೊಡಗಿನ ಸೇನಾಧಿಕಾರಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ.

Ad Widget

ಇವರು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು. ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಲಹಾಬಾದ್ ನಲ್ಲಿ ಎಸ್.ಎಸ್. ಬಿ. ಪೂರ್ಣಗೊಳಿಸಿದ್ದ ತನುಷ್ ಅಪ್ಪಯ್ಯ, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದ 8ನೇ ರ್ಯಾಂಕ್ ಪಡೆದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಗೆ ಸೇರಿದ್ದರು.

ತನುಷ್ ಅಪ್ಪಯ್ಯ ಅವರು ಕೊಳತೋಡು ಭೈಗೋಡು ಗ್ರಾಮದ ಮುರುವಂಡ ಎ.ಬೋಪಣ್ಣ (ಮುತ್ತು) ಮತ್ತು ವಿನುತಾ (ತಾಮನೆ: ಬೊಜ್ಜಂಗಡ) ದಂಪತಿಯ ಪುತ್ರರಾಗಿದ್ದಾರೆ.

Leave a Comment

Your email address will not be published. Required fields are marked *