ಸಮಗ್ರ ನ್ಯೂಸ್: ಹೋಟೆಲ್‍ನಲ್ಲಿ ತಂಗಿದ್ದ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಮೋತಿ ಮಹಲ್ ಹೋಟೆಲ್ ನ ಸ್ವಿಮ್ಮಿಂಗದ ಪೂಲ್‍ನಲ್ಲಿ ಕೇರಳದ ತಿರುವನಂತಪುರಂ ನಿವಾಸಿ ಯೂನಿಯನ್ ಬ್ಯಾಂಕ್‍ನ ಅಧಿಕಾರಿ ಗೋಪು ಆರ್ ನಾಯರ್ ಮೃತದೇಹ ಪತ್ತೆಯಾಗಿದೆ.
ನಿನ್ನೆ ಮಂಗಳೂರಿಗೆ ಬಂದಿದ್ದ ಅವರು ಮೋತಿ ಮಹಲ್ ಹೊಟೇಲ್‍ನಲ್ಲಿ ಉಳಿದು ಕೊಂಡಿದ್ದರು ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಬಂದು ಸ್ವಿಮ್ಮಿಂಗ್ ಪೂಲ್ ಬಳಿ ವಿಹರಿಸಿದ್ದರು,
ಆದರೆ ಕಳೆದ ರಾತ್ರಿ 11 ಅಡಿ ಆಳದಲ್ಲಿದ್ದ ನಾಯರ್ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದಾರೆ. ಈಜುತ್ತಿರುವಾಗ ಮೇಲೆ ಬರಲು ಸಾಧ್ಯವಾಗದೆ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್ ರೂಂನಲ್ಲಿ ಮದ್ಯ ಸೇವಿಸಿರುವ ಅನುಮಾನವಿದೆ. ರೂಮ್ ನಲ್ಲಿ ಖಾಲಿಯಾದ ಮದ್ಯ ಬಾಟಲಿ, ಆಹರ ಪತ್ತೆಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.