Ad Widget .

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ

ಸಮಗ್ರ ನ್ಯೂಸ್: ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗಾಗಿ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ ತಾಂತ್ರಿಕ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ.

Ad Widget . Ad Widget .

ಮಾತೃವಂದನಾ ಯೋಜನೆ ಸಾಫ್ಟ್ ವೇರ್ ಅನ್ನು ಮಿಷನ್ ಶಕ್ತಿ 2.O ಸಾಫ್ಟ್ ವೇರ್ ಜೊತೆಗೆ ಜೋಡಿಸಲಾಗಿದ್ದು, ನೂತನ ತಂತ್ರಾಂಶದಲ್ಲಿ ಹಳೆಯ ಡೇಟಾಗಳು ಲಭ್ಯವಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಹಣ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ ಎಂದು ತಿಳದುಬಂದಿದೆ.

Ad Widget . Ad Widget .

ಈ ಯೋಜನೆಯಡಿ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ ಆರೈಕೆ ಮತ್ತು ರೋಗಗಳ ತಡೆಗಟ್ಟುವಿಕೆಗಾಗಿ 5,000 ರೂ. ಆರ್ಥಿಕ ಸಹಾಯಧನ ನೀಡಲಾಗುತ್ತಿತ್ತು.

ಮಹಿಳೆಯರಿಗಾಗಿ ಈ ಯೋಜನೆಯನ್ನು ತರಲಾಗಿದೆ. ಈ ಎಲ್ಲಾ ಹಣ ನೇರವಾಗಿ ಮಹಿಳೆಯರ ಖಾತೆಗೆ ಹೋಗುತ್ತದೆ. ಒಟ್ಟು 5,000 ರೂ.ಗಳನ್ನು ಕಂತುಗಳಲ್ಲಿ ನೀಡಲಾಗುವುದು. ಮೊದಲ ಕಂತು 1,000 ರೂ., ಎರಡನೇ ಕಂತು 2,000 ರೂ., ಮೂರನೇ ಕಂತು 2,000 ರೂ. ಮೊದಲ ಹೆರಿಗೆಯಲ್ಲಿ ಹೆಣ್ಣು ಅಥವಾ ಗಂಡು ಮಗು ಜನಿಸಿದರೆ ಮೂರು ಹಂತಗಳಲ್ಲಿ 1,000 ರೂ., ಆರು ತಿಂಗಳ ನಂತರ 2,000 ರೂ., ಹೆರಿಗೆಯ 14 ವಾರಗಳಲ್ಲಿ 2,000 ರೂ.ನೀಡಲಾಗುತ್ತಿತ್ತು.

Leave a Comment

Your email address will not be published. Required fields are marked *