ಸಮಗ್ರ ನ್ಯೂಸ್ : ಕುಕ್ಕೆ ಶ್ರೀ ಸುಬ್ರ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಹಿಂದಿ ವಿಭಾಗದ ವತಿಯಿಂದ “ಹಿಂದಿ” ಸಂಘದ ಉದ್ಘಾಟನಾ ಸಮಾರಂಭ ಸೆ.8 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಕೆ ವಹಿಸಿದ್ದು ಉದ್ಘಾಟನೆಯನ್ನು ಪ್ರೊ. ರಾಮಕೃಷ್ಣ ಕೆ. ಎಸ್. ವಿಭಾಗಾಧ್ಯಾಕ್ಷರು, ಹಿಂದಿ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಇವರು ನೆರವೇರಿಸಿ ಬಳಿಕ ಹಿಂದಿ ಭಾಷೆಯ ಮಹತ್ವ ಹಾಗೂ ಭಾಷೆಯನ್ನು ಬೆಳೆಸುವಲ್ಲಿ ನಮ್ಮ ಪಾತ್ರ ಏನೂ ಎಂಬುದನ್ನು ತಮ್ಮ ಮಾತಿನ ಮೂಲಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಎಲ್ಲರನ್ನು ಸ್ವಾಗತಿಸಿ, ಹಿಂದಿ ಸಂಘದ ಅಧ್ಯಕ್ಷೆ ದೀಕ್ಷಾ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಹಿಂದಿ ಸಂಘದ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.