Ad Widget .

ದಸರಾ ರಜೆಗೆ ಈ ಬಾರಿಯೂ ಕತ್ತರಿ| ವಿದ್ಯಾರ್ಥಿ, ಶಿಕ್ಷಕರಿಗೆ ನಿರಾಸೆ

ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳಿನಲ್ಲಿ ಶಾಲೆಗಳಿಗೆ ದಸರಾ ರಜೆ ಸಿಗಲಿದೆ ಎಂದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ದಸರಾ ರಜೆ ನೀಡುವ ಕುರಿತು ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ರಜೆಯಲ್ಲಿ ಕಡಿತ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Ad Widget . Ad Widget .

ಸರ್ಕಾರಿ ಶಾಲೆಗಳ ದಸರಾ ರಜೆಯನ್ನು ಕಡಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಟೋಬರ್ 2ರಿಂದ 29ರ ತನಕ ದಸರಾ ರಜೆಯನ್ನು ನೀಡಲಾಗುತ್ತಿತ್ತು.

Ad Widget . Ad Widget .

ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಸಮಯದಲ್ಲಿ ನಡೆಯದ ತರಗತಿ ಸರಿದೂಗಿಸಲು ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ ಬಾರಿ ಜನ ಜೀವನ ಸಾಮಾನ್ಯವಾಗಿದ್ದರೂ ಸಹ ರಜೆ ಕಡಿತ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.

ಈ ಬಾರಿ ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 8 ರಿಂದ 24ರ ತನಕ ದಸರಾ ರಜೆ ನೀಡಲಾಗಿದೆ. ವಿಶೇಷ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಶಿಕ್ಷಕರು ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಿದೆ.

ಸರ್ಕಾರ 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದಾಗಲೇ ದಸರಾ ರಜೆ ಕಡಿತಗೊಳ್ಳುವ ಸೂಚನೆ ಸಿಕ್ಕಿತ್ತು. ಈ ವರ್ಷ ಒಟ್ಟು ಲಭ್ಯವಾಗುವ ಶಾಲಾ ಕರ್ತವ್ಯದ ದಿನಗಳು 244. ಪರೀಕ್ಷೆ, ಮೌಲ್ಯಾಂಕನ ಕಾರ್ಯಗಳಿಗೆ 26 ದಿನಗಳು. ಪಠ್ಯೇತರ ಚಟುವಟಿಕೆ/ ಪಠ್ಯ ಚಟುವಿಕೆ/ ಸ್ಪರ್ಧೆಗಳ ನಿರ್ವಹಣೆಗಾಗಿ 24 ದಿನಗಳು. ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯದ ದಿನಗಳು 180 ಎಂದು ಪಟ್ಟಿ ಮಾಡಲಾಗಿತ್ತು.

Leave a Comment

Your email address will not be published. Required fields are marked *