Ad Widget .

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‌72 ಹಾವುಗಳು, 6 ಮಂಗಗಳು ವಶಕ್ಕೆ

ಸಮಗ್ರ ನ್ಯೂಸ್: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬುಧವಾರ 55 ಬಾಲ್ ಹೆಬ್ಬಾವುಗಳು, 17 ಕಿಂಗ್ ಕೋಬ್ರಾಗಳು ಮತ್ತು ಆರು ಕಾಪುಚಿನ್ ಮಂಗಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಹೆಬ್ಬಾವುಗಳು ಮತ್ತು ನಾಗರಹಾವುಗಳು ಜೀವಂತವಾಗಿದ್ದು, ಕೋತಿಗಳು ಸತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಬೆಂಗಳೂರು ಕಸ್ಟಮ್ಸ್ ಹೇಳಿಕೆಯ ಪ್ರಕಾರ, ಪ್ರಾಣಿಗಳನ್ನು ಸಾಮಾನು ಸರಂಜಾಮುಗಳಲ್ಲಿ ತುಂಬಿಸಿ ಬ್ಯಾಂಕಾಕ್‌ನಿಂದ ಏರ್ ಏಷ್ಯಾ ವಿಮಾನದಲ್ಲಿ (ವಿಮಾನ ಸಂಖ್ಯೆ ಎಫ್‌ಡಿ 137) ಬುಧವಾರ ರಾತ್ರಿ 10:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

Ad Widget . Ad Widget .

ಬ್ಯಾಂಕಾಕ್‌ನಿಂದ ರಾತ್ರಿ 10:30ಕ್ಕೆ ಫ್ಲೈಟ್ ನಂ. ಎಫ್‌ಡಿ 137 ಏರ್ ಏಷ್ಯಾ ಮೂಲಕ ಬಂದ ಸಾಮಾನು ಸರಂಜಾಮುಗಳಲ್ಲಿ ಒಟ್ಟು 55 ಬಾಲ್ ಹೆಬ್ಬಾವುಗಳು (ವಿವಿಧ ಬಣ್ಣದ) ಮತ್ತು 17 ಕಿಂಗ್ ಕೋಬ್ರಾಗಳನ್ನು ಒಳಗೊಂಡ ಒಟ್ಟು 78 ಪ್ರಾಣಿಗಳು ಇರುವುದು ಕಂಡುಬಂದಿದೆ. ಇವುಗಳು ಜೀವಂತವಾಗಿ ಮತ್ತು ಸಕ್ರಿಯ ಸ್ಥಿತಿಯಲ್ಲಿದ್ದರೂ, ಆರು (06) ಕಪುಚಿನ್ ಮಂಗಗಳು ಸತ್ತಿರುವುದು ಕಂಡುಬಂದಿದೆ ಎಂದು ಬೆಂಗಳೂರು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *