ಸಮಗ್ರ ನ್ಯೂಸ್: ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತೀ ವರ್ಷ ಕೊಡ ಮಾಡುವ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023” ಕ್ಕೆ ಆಯ್ಕೆಯಾದ ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರನ್ನು ಯುವಕ ಮಂಡಲ ಕೊಳ್ತಿಗೆ ಪೆರ್ಲಂಪಾಡಿ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಯುವಕ ಮಂಡಲದ ಅಧ್ಯಕ್ಷ ಭರತ್ ರಾಜ್ ಕುದ್ಕುಳಿ ಸಭಾಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾ. ಪಂ. ಅಧ್ಯಕ್ಷೆ ಅಕ್ಕಮ್ಮ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಡಾ.ಅನುರಾಧಾ ಕುರುಂಜಿಯವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ತೀರ್ಥಾನಂದ ಗೌಡ ದುಗ್ಗಳ, ಪೆರ್ಲಂಪಾಡಿ ಆದಿಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಗೋಳಿತ್ತಡ್ಕ, ಕೊಳ್ತಿಗೆ ಯುವಕ ಮಂಡಲದ ಕಾರ್ಯದರ್ಶಿ ವಿಜೇತ್ ರೈ ಕೆಳಗಿನಮನೆ ಮೊದಲಾದವರು ಉಪಸ್ಥಿತರಿದ್ದರು