ಸಮಗ್ರ ನ್ಯೂಸ್:ಕರಾವಳಿ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಹೊತ್ತು ಕಳೆದ 2 ವರ್ಷಗಳಿಂದ ರಾಜ್ಯಾದ್ಯಂತ ಸುದ್ದಿ ಬಿತ್ತರಿಸುತ್ತಿರುವ ಸಮಗ್ರ ಮೀಡಿಯಾ ನೆಟ್ವರ್ಕ್ ನ ಸಮಗ್ರ ಸಮಾಚಾರ.ಕಾಂ(www. samagra samachara.com) ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಈಗಾಗಲೇ ಸ್ಪಷ್ಟವಾದ ಬರಹಗಳು ಮತ್ತು ಸುದ್ದಿಗಳ ಮೂಲಕ ಜನರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಪ್ರಕಟಿಸುತ್ತಾ ಓದುಗರೊಂದಿಗೆ ಸ್ಪಂದಿಸುತ್ತಾ ಬೆಳೆದು ಬಂದಿದ್ದು, ಜನರ ಧ್ವನಿಯಾಗಿದೆ.
ಇದೀಗ ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರವು ದೀಪಾವಳಿ ವಿಶೇಷಾಂಕವನ್ನು ಹೊರತರುತ್ತಿದೆ. ಹಾಗಾಗಿ ನಿಮ್ಮ ಬರಹ ಕಥೆ, ಕವನ, ಲೇಖನ, ಹಾಗೂ ಸೆಲ್ಫಿ, ಮಕ್ಕಳ ಫೋಟೋಗಳನ್ನು ಕಳುಹಿಸಿ. ಈ ಅವಕಾಶಕ್ಕೆ ಇದೇ ಬರುವ ಅ.12 ಕೊನೆಯ ದಿನಾಂಕ ಆಗಿರುತ್ತದೆ.
ಏನೆಲ್ಲಾ ಇರಲಿವೆ ಗೊತ್ತಾ!?
ಅಕ್ಷರ ತೋರಣ: ಕಥೆ, ಕವನ, ಲೇಖನ, ಹನಿಗವನ, ಸಾಧಕರ ಪರಿಚಯ, ಕೃಷಿ, ಪ್ರವಾಸಿ ತಾಣ ಕುರಿತ ಬರಹಗಳನ್ನು ಆಹ್ವಾನಿಸುತ್ತಿದೆ. ಆಸಕ್ತಿದಾಯಕ ಬರಹಗಳನ್ನು ಪ್ರಕಟಿಸಲಾಗುವುದು.
ದೀಪಾವಳಿ ಕಥಾಸ್ಪರ್ಧೆ: ರಾಜ್ಯದ ಯುವ ಕಥೆಗಾರರಿಗೆ ಕಥಾ ಸ್ಪರ್ಧೆಯ ಅವಕಾಶ. ಕಾಲ್ಪನಿಕ ಅಥವಾ ವಾಸ್ತವ ಸನ್ನಿವೇಶಗಳ ಕಥಾಹಂದರವನ್ನು ಬರೆದು ಕಳುಹಿಸಿ. ಉತ್ತಮ ಕಥೆಗಳಿಗೆ ಬಹುಮಾನವಿದೆ. (ಷರತ್ತುಗಳು ಅನ್ವಯ)
ಮೂರನೇ ಕಣ್ಣು: ಕ್ಯಾಮರದಲ್ಲಿ ಸೆರೆ ಹಿಡಿದ ಸುಂದರ, ಅರ್ಥಗರ್ಭಿತ ಛಾಯಾಚಿತ್ರ ಸ್ಪರ್ಧೆ. ಹವ್ಯಾಸಿ ಫೋಟೋಗ್ರಾಫರ್ ಗಳು ಪಾಲ್ಗೊಳ್ಳಬಹುದು. ಆಯ್ಕೆಯಾದ ಫೋಟೋಗಳಿಗೆ ಬಹುಮಾನವಿದೆ. ವಿವರಗಳಿಗಾಗಿ ಸಂಪರ್ಕಿಸಿ:7892096793 (ಷರತ್ತುಗಳು ಅನ್ವಯ).
ಮುದ್ದು ಕಂದ ಫೋಟೋ ಸ್ಪರ್ಧೆ:
ವಿಶೇಷಾಂಕದಲ್ಲಿ ಮಕ್ಕಳ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದ್ದು 4 ವರ್ಷದ ಒಳಗಿನ ನಿಮ್ಮ ಕಂದಮ್ಮಗಳ ಫೋಟೋ ಕಳುಹಿಸಬಹುದು. ಸ್ಪರ್ಧೆಗೆ ಪ್ರವೇಶ ಶುಲ್ಕವಿದ್ದು, ವಿಜೇತ ಮೂರು ಕಂದಮ್ಮಗಳಿಗೆ ಆಕರ್ಷಕ ಬಹುಮಾನವಿದೆ.
ಸೆಲ್ಫಿ ಪಾಯಿಂಟ್: ನೀವು ಸೆಲ್ಫಿ ಪ್ರಿಯರೇ ಹಾಗಿದ್ರೆ, ನಿಮ್ಮ ಒಂದು ಸುಂದರ ಸೆಲ್ಫಿಯನ್ನು 9108131193 ಕಳುಹಿಸಿ. ಒಬ್ಬರು ಒಂದು ಸೆಲ್ಫಿ ಫೋಟೋ ಮಾತ್ರ ಕಳುಹಿಸಬೇಕು. ಫೋಟೋದ ಜೊತೆಗೆ ನಿಮ್ಮ ಹೆಸರು ಮರೆಯದಿರಿ. ನೈಜತೆ ಹೊಂದಿರುವ ಫೋಟೋಗಳನ್ನು ಆಯ್ದು ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಲಾಗುತ್ತದೆ.
ಮೂರನೇ ಕಣ್ಣು: ನೈಜತೆಯ ಕೈಗನ್ನಡಿ ಕ್ಯಾಮೆರಾಗಳು. ಹಾಗಾಗಿ ನಿಮ್ಮ ಕ್ಯಾಮೆರಾದಿಂದ ಸೆರೆಹಿಡಿದ ಅತ್ಯಪರೂಪ ಪೋಟೋಗಳ ಸ್ಪರ್ಧೆ ಏರ್ಪಡಿಸಿದ್ದು, ಅರ್ಥಗರ್ಭಿತ ಸುಂದರ ಛಾಯಾಚಿತ್ರಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಆಯ್ಕೆಯಾದ ಪೋಟೋಗೆ ಬಹುಮಾನವಿದೆ.
ನಮ್ಮ ವಿಳಾಸ: ಸಮಗ್ರ ಸಮಾಚಾರ 2 ನೇ ಮಹಡಿ, ಶ್ರೀ ದುರ್ಗಾ ಕಾಂಪ್ಲೆಕ್ಸ್, ಜ್ಯೋತಿ ಸರ್ಕಲ್ ಸುಳ್ಯ
ವೆಬ್ ಸೈಟ್: www.Samagrasamachara.com
ಇಮೇಲ್: [email protected]
ವಾಟ್ಸಾಪ್ ಸಂಖ್ಯೆ: 91081 31193