ಸಮಗ್ರ ನ್ಯೂಸ್: ಗ್ಯಾಂರಂಟಿ ಯೋಜನೆಗಳನ್ನು ಜಾರಿ ಮಾಡಿ ಆರ್ಥಿಕ ಹೊರೆಯಾಗಿರುವುದರಿಂದ ಆದಾಯ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಅಬಕಾರಿ ಮೂಲದಿಂದ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಮಾಲ್, ಸೂಪರ್ ಮಾರ್ಕೆಟ್ ಗಳಲ್ಲಿಯೂ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಈಗಾಗ್ಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಈ ವಾರ ಮತ್ತೊಂದು ಸುತ್ತಿನ ಸಭೆ ನಡೆಸಲು ಅಬಕಾರಿ ಇಲಾಖೆ ತಯಾರಿ ನಡೆಸಿದೆ. ಮಾಲ್, ಪಬ್ ಗಳಿಗೆ ಮದ್ಯ ಲೈಸನ್ಸ್ ಕೊಡಲು ಪ್ಲಾನ್ ಮಾಡಲಾಗಿದ್ದು, ಆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಸಜ್ಜಾಗಿದೆ. ಈ ಹಿಂದೆ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿತ್ತು. ಇದೀಗ ಹೊಸ ಪಬ್ ಗಳಿಗೂ ಅನುಮತಿ ನೀಡಲು ಸರ್ಕಾರ ಸಜ್ಜಾಗಿದೆ. ಅಲ್ಲದೇ ಲೈಸನ್ಸ್ ಬದಲಾವಣೆಗೆ ಶೇ.5 ರಷ್ಟು ಶುಲ್ಕ ಏರಿಕೆಗೂ ಪ್ಲಾನ್ ಮಾಡಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಬಾರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸುಂಕ ಹೆಚ್ಚಿಸಿರುವ ಹಿನ್ನೆಲೆ ಶೇಕಡಾ 15% ಮದ್ಯ ಮಾರಾಟ ಕುಸಿತ ಕಂಡಿದೆ. ಹೊಸ ಬಾರ್ ಪಬ್ ಗಳಿಗೆ, ಮಾಲ್ ಗಳಿಗೆ ಅವಕಾಶ ನೀಡಿದ್ರೆ ಮತ್ತಷ್ಟು ಸಂಕಷ್ಟಕ್ಕೆ ಮಾಲೀಕರು ಸಿಲುಕಲಿದ್ದಾರೆ. ಇನ್ನು ಬಂಡವಾಳ ಶಾಯಿಗಳು ಬಾರ್ ಪಬ್ ತೆರೆಯೋ ಭಯ ಶುರುವಾಗಿದೆ. ಸದ್ಯ ಅನೇಕ ವರ್ಷಗಳಿಂದ ಬಾರ್ ಪಬ್ ನಡೆಸುತ್ತಿರೋ ಮದ್ಯ ಮಾರಾಟಗಾರರಿಗೆ ಆತಂಕ ಹೆಚ್ಚಾಗಿದೆ.